ಬಿಜೆಪಿಯಿಂದ ರಾಜಕೀಯ ದಾಳವಾಗಿ ಬಳಕೆ: ಸಿಎಂ ಸಿದ್ದರಾಮಯ್ಯ
ಲೋಕಾಯುಕ್ತ ನ್ಯಾ. ಚಾಕು ಇರಿತ ಪ್ರಕರಣ

ಮಂಡ್ಯ, ಮಾ.8: ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಚಾಕು ಇರಿತ ಪ್ರಕರಣವನ್ನು ಬಿಜೆಪಿ ರಾಜಕೀಯ ದಾಳವನ್ನಾಗಿ ಬಳಸಿಕೊಳ್ಳಲು ಪ್ರಯತ್ನಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಕೆ.ಎಸ್.ಪುಟ್ಟಣ್ಣಯ್ಯಗೆ ಹಸಿರು ನಮನ ಕಾರ್ಯಕ್ರಮಕ್ಕೆ ಗುರುವಾರ ಆಗಮಿಸಿದ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, ತಾನು ರಾಜೀನಾಮೆ ಕೊಡುವುದಿಲ್ಲ, ಅಂತಹ ಪ್ರಸಂಗ ಬರುವುದೂ ಇಲ್ಲ ಎಂದರು.
ಲೋಕಾಯುಕ್ತರ ಚಾಕು ಇರಿತ ಪ್ರಕರಣದಲ್ಲಿ ಭದ್ರತಾ ಲೋಪವಾಗಿದ್ದು, ಗೃಹ ಇಲಾಖೆ ಕಾರ್ಯದರ್ಶಿಯಿಂದ ತನಿಖೆ ನಡೆಸಲು ಆದೇಶಿಸಲಾಗಿದೆ. ಈಶ್ವರಪ್ಪ ನಾಲಗೆ, ಮೆದುಗಳಿಗೆ ಕನೆಕ್ಷನ್ ಇಲ್ಲವೆಂದು ವ್ಯಂಗ್ಯವಾಡಿದರು.
ಕಾಂಗ್ರೆಸ್‍ಗೆ ರಾಜ್ಯಸಭೆಯಲ್ಲಿ 3 ಸ್ಥಾನ ಗೆಲ್ಲುವ ಅವಕಾಶ ಹಾಗೂ ಆರ್ಹತೆ ಇದೆ. ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಮುಂಬರುವ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಹಾಕುವ ಬಗ್ಗೆ ರೈತಸಂಘದವರ ಜತೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಶಾಸಕರಾದ ಎನ್.ಚಲುವರಾಯಸ್ವಾಮಿ, ರಮೇಶ್‍ಬಾಬು ಬಂಡಿಸಿದ್ದೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಬಿ.ಎಸ್.ಶಿವಣ್ಣ, ಎಲ್.ಡಿ.ರವಿ, ಇತರ ಮುಖಂಡರು ಹಾಜರಿದ್ದರು







