ಉಡುಪಿ:8 ಶಾಲಾ ಗ್ರಾಹಕ ಕ್ಲಬ್ ಪ್ರಾರಂಭಕ್ಕೆ ಅನುಮತಿ
ಉಡುಪಿ, ಮಾ.8: ಉಡುಪಿ ಬಳಕೆದಾರರ ವೇದಿಕೆ ಹಾಗೂ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಮೂಲಕ ಉಡುಪಿ ಜಿಲ್ಲೆಯಲ್ಲಿ 8 ಶಾಲಾ ಗ್ರಾಹಕ ಕ್ಲಬ್ ಗಳನ್ನು ಪ್ರಾರಂಭಿಸಲು ಸರಕಾರ ಒಪ್ಪಿಗೆ ನೀಡಿದೆ.
ವೇದಿಕೆ ಉಡುಪಿ ಜಿಲ್ಲೆಯ 8 ಪ್ರೌಢ ಶಾಲೆಗಳ ಒಪ್ಪಿಗೆ ಪಡೆದು ಸಮನ್ವಯ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರಿಗೆ ತರಬೇತಿ ಕಾರ್ಯಕ್ರಮವನ್ನು ಇಲ್ಲಿ ಹಮ್ಮಿಕೊಂಡಿತ್ತು. ಈ ವೇಳೆ ಶಾಲೆಗಳಿಗೆ ಸರಕಾರದ ಅನುದಾನವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವೇದಿಕೆ ಸಂಚಾಲಕ ದಾಮೋದರ ಐತಾಳ್ ಸ್ವಾಗತಿಸಿ, ವಿಶ್ವಸ್ಥ ಎ.ಪಿ.ಕೊಡಂಚ ಗ್ರಾಹಕ ಕ್ಲಬ್ ಸ್ಥಾಪನೆಯ ಉದ್ದೇಶ, ಕ್ರಮಗಳನ್ನು ವಿವರಿಸಿದರು. ಶಾಂತರಾಜ ಐತಾಳ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಯು.ವಾದಿರಾಜ ಆಚಾರ್ಯ ವಂದಿಸಿ, ನಾರಾಯಣ ಕಾರ್ಯಕ್ರಮ ನಿರ್ವಹಿ ಸಿದರು.
Next Story





