ಉಡುಪಿ; ದ್ವಿತೀಯ ಪಿಯುಸಿ ಪರೀಕ್ಷೆ: 132 ಮಂದಿ ಗೈರು
ಉಡುಪಿ, ಮಾ.8: ಜಿಲ್ಲೆಯ 27 ಪರೀಕ್ಷಾ ಕೇಂದ್ರಗಳಲ್ಲಿ ಗುರುವಾರ ನಡೆದ ಈ ಸಾಲಿನ ದ್ವಿತೀಯ ಪಿಯುಸಿಯ ಮೂರು ವಿಷಯಗಳ ಪರೀಕ್ಷೆಗಳಿಗೆ ಒಟ್ಟು 132 ಮಂದಿ ಗೈರುಹಾಜರಾಗಿದ್ದರು ಎಂದು ಜಿಲ್ಲಾ ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆಯ ಪ್ರಕಟಣೆ ತಿಳಿಸಿದೆ.
ಐಚ್ಛಿಕ ಕನ್ನಡ ಪರೀಕ್ಷೆಗೆ ಕುಂದಾಪುರದ ಭಂಡಾರ್‌ಕಾರ್ಸ್ ಪ.ಪೂ. ಕಾಲೇಜಿ ನಿಂದ ಓರ್ವ ಹೆಸರು ನೊಂದಾಯಿಸಿಕೊಂಡಿದ್ದರೂ, ಪರೀಕ್ಷೆಗೆ ಆತ ಗೈರು ಹಾಜರಾಗಿದ್ದ. ಇನ್ನು ರಸಾಯನಶಾಸ್ತ್ರ ಪರೀಕ್ಷೆಗೆ ಜಿಲ್ಲೆಯಿಂದ 5597 ವಿದ್ಯಾರ್ಥಿ ಗಳು ಹೆಸರುನೊಂದಾಯಿಸಿಕೊಂಡಿದ್ದು ಅವರಲ್ಲಿ 5574 ಮಂದಿ ಪರೀಕ್ಷೆ ಬರೆದು 23 ಮಂದಿ ಗೈರಾಗಿದ್ದರು.
ಇಂದೇ ನಡೆದ ಲೆಕ್ಕಶಾಸ್ತ್ರ ಪರೀಕ್ಷೆಗೂ 108 ಮಂದಿ ಗೈರುಹಾಜರಾಗಿದ್ದರು. ಪರೀಕ್ಷೆಗೆ ಹೆಸರು ನೊಂದಾಯಿಸಿದ 8568 ವಿದ್ಯಾರ್ಥಿಗಳಲ್ಲಿ 8460 ಮಂದಿ ಇಂದು ಹಾಜರಾಗಿದ್ದು ಎಂದು ಡಿಡಿಪಿಯು ಪ್ರಕಟಣೆ ತಿಳಿಸಿದೆ.
ಬುಧವಾರ ನಡೆದ ರಾಜ್ಯಶಾಸ್ತ್ರ ಪರೀಕ್ಷೆಗೆ 64 ವಿದ್ಯಾರ್ಥಿಗಳು ಗೈರುಹಾಜರಾ ಗಿದ್ದರು. ಪರೀಕ್ಷೆಗೆ ಹೆಸರು ನೊಂದಾಯಿಸಿಕೊಂಡ 1590 ವಿದ್ಯಾರ್ಥಿಗಳಲ್ಲಿ 1526 ಮಂದಿ ಪರೀಕ್ಷೆ ಬರೆದಿದ್ದಾರೆ. ಆದರೆ ಭೂಗರ್ಭಶಾಸ್ತ್ರ ಪರೀಕ್ಷೆಗೆ ಜಿಲ್ಲೆಯಲ್ಲಿ ಯಾರೂ ಹೆಸರು ನೊಂದಾಯಿಸಿರಲಿಲ್ಲ ಎಂದು ಪ್ರಕಟಣೆ ತಿಳಿಸಿದೆ.







