ಶಿಕಾರಿಪುರ : ತಾಲೂಕು ಕಾರ್ಯನಿರತ ಪರ್ತಕರ್ತರ ಸಂಘದ ನೂತನ ಸಂಚಾಲಕರಾಗಿ ಕೆ.ಎಸ್ ಹುಚ್ರಾಯಪ್ಪ ಆಯ್ಕೆ

ಶಿಕಾರಿಪುರ,ಮಾ.9: ತಾಲೂಕು ಕಾರ್ಯನಿರತ ಪರ್ತಕರ್ತರ ಸಂಘದ ನೂತನ ಸಂಚಾಲಕರಾಗಿ ಕೆ.ಎಸ್ ಹುಚ್ರಾಯಪ್ಪ ಗುರುವಾರ ಸಂಜೆ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಸದಸ್ಯರ ಆಂತರಿಕ ಒಪ್ಪಂದದಂತೆ ಹಾಲಿ ಅಧ್ಯಕ್ಷ ಎಸ್.ಬಿ ಅರುಣ್‌ಕುಮಾರ್‌ರವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸರ್ವ ಸದಸ್ಯರ ಅಭಿಪ್ರಾಯದನ್ವಯ ಸಂಚಾಲನಾ ಸಮಿತಿಯನ್ನು ರಚಿಸಲಾಗಿದ್ದು ಸಂಚಾಲಕರಾಗಿ ಕೆ.ಎಸ್ ಹುಚ್ರಾಯಪ್ಪ, ಕಾರ್ಯದರ್ಶಿಯಾಗಿ ರಘು ಎಚ್.ಎಸ್ ರನ್ನು ಆಯ್ಕೆಗೊಳಿಸಲಾಯಿತು.
ಜಿಲ್ಲಾ ಸಂಘದ ಉಪಾಧ್ಯಕ್ಷ ವೈಭವ ಶಿವಣ್ಣ ರವರ ಅಧ್ಯಕ್ಷತೆಯಲ್ಲಿ ಸುದ್ದಿಮನೆಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಹಿರಿಯ ಸದಸ್ಯ ಬಾಲಕೃಷ್ಣ ಜೋಯಿಸ್, ಬಿ.ವಿ ಶೇಷಗಿರಿ, ನವೀನಕುಮಾರ್, ವೈಭವ ಬಸವರಾಜ್, ರಾಜು ಭೋಗಿ, ದೀಪು ದೀಕ್ಷಿತ್, ಪ್ರಕಾಶ್ ಹೋತನಕಟ್ಟೆ, ಸಂತೋಷ ಕುಲಕರ್ಣಿ, ಕಾಳಿಂಗರಾವ್, ನರಸಿಂಹಸ್ವಾಮಿ, ಮಂಜಪ್ಪ ಮತ್ತಿತರರು ಹಾಜರಿದ್ದರು.
Next Story





