ಶಿವಮೊಗ್ಗ : ಲಾರಿ ಹರಿದು ಪಾದಚಾರಿ ಮೃತ್ಯು
ಶಿವಮೊಗ್ಗ, ಮಾ. 9: ಲಾರಿ ಹರಿದ ಪರಿಣಾಮ ರಸ್ತೆ ದಾಟುತ್ತಿದ್ದ ಪಾದಚಾರಿಯೋರ್ವರು ಸ್ಥಳದಲ್ಲಿಯೇ ಅಸುನೀಗಿದ ಘಟನೆ ನಗರದ ಹೊರವಲಯ ತ್ಯಾವರೆಚಟ್ನಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ದಾವಣಗೆರೆ ಜಿಲ್ಲೆಯ ಮೋಟನಹಳ್ಳಿಯ ನಿವಾಸಿಯಾದ ರಾಜಪ್ಪ (35) ಮೃತಪಟ್ಟ ಪಾದಚಾರಿ ಎಂದು ಗುರುತಿಸಲಾಗಿದೆ. ಇವರು ರಸ್ತೆ ದಾಟುವ ವೇಳೆ ವೇಗವಾಗಿ ಆಗಮಿಸಿದ ಲಾರಿ ಹರಿದು ಹೋಗಿದೆ. ಈ ಸಂಬಂಧ ಲಾರಿ ಚಾಲಕನ ವಿರುದ್ದ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





