ಸೇನಾ ಠಾಣೆ ಮೇಲೆ ತಾಲಿಬಾನ್ ದಾಳಿ: 10 ಪೊಲೀಸರ ಸಾವು

ಕಾಬೂಲ್, ಮಾ. 9: ಅಫ್ಘಾನಿಸ್ತಾನದ ತಾಖರ್ ಪ್ರಾಂತದ ದೂರದ ಪ್ರದೇಶವೊಂದರಲ್ಲಿ ಸೇನಾ ಠಾಣೆಯೊಂದರ ಮೇಲೆ ತಾಲಿಬಾನ್ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 10 ಸ್ಥಳೀಯ ಪೊಲೀಸರು ಮೃತಪಟ್ಟಿದ್ದಾರೆ ಹಾಗು 9 ಮಂದಿ ಗಾಯಗೊಂಡಿದ್ದಾರೆ.
ಭಾರೀ ಸಂಖ್ಯೆಯ ತಾಲಿಬಾನ್ ಬಂಡುಕೋರರು ಗುರುವಾರ ರಾತ್ರಿ ಸೇನಾ ಠಾಣೆಯ ಮೇಲೆ ದಾಳಿ ನಡೆಸಿದರು ಎಂದು ಪ್ರಾಂತೀಯ ಪೊಲೀಸ್ ವಕ್ತಾರರು ತಿಳಿಸಿದರು.
ಖ್ವಾಜಾ ಘರ್ ಜಿಲ್ಲೆಯಲ್ಲಿ ಅಫ್ಘಾನ್ ಸೈನಿಕರಿಗೆ ನೆರವು ನೀಡಲು ಸ್ಥಳೀಯ ಪೊಲೀಸರು ಠಾಣೆಗೆ ಹೋಗುತ್ತಿದ್ದಾಗ ಭಯೋತ್ಪಾದಕರು ಅವರ ಮೇಲೆ ದಾಳಿ ನಡೆಸಿದರು ಎಂದರು.
ಸೈನಿಕರಿಗೆ ಯಾವುದೇ ಗಾಯವಾಗಿಲ್ಲ.
ದಾಳಿಯ ಹೊಣೆಯನ್ನು ತಾಲಿಬಾನ್ ವಕ್ತಾರ ಝಬೀಯುಲ್ಲಾ ಮುಜಾಹಿದ್ ವಹಿಸಿಕೊಂಡಿದ್ದಾನೆ.
Next Story





