ಪ್ರತ್ಯೇಕ ಪ್ರಕರಣ: ಐವರ ಆತ್ಮಹತ್ಯೆ
ಕೊಲ್ಲೂರು, ಮಾ.9: ಮಾನಸಿಕ ಖಿನ್ನತೆ ಖಾಯಿಲೆಯಿಂದ ಬಳಲುತ್ತಿದ್ದ ಮುದೂರು ಗ್ರಾಮದ ಸೂಲಬೇರು ನಿವಾಸಿ ಮ್ಯಾಥ್ಯೂ ಎಂಬವರ ಮಗ ಸಾಜು ಮ್ಯಾಥ್ಯೂ(33) ಜೀವನದಲ್ಲಿ ಜಿಗುಪ್ಸೆಗೊಂಡು ಮಾ.5ರಿಂದ ಮಾ.8ರ ನಡುವಿನ ಅವಧಿಯಲ್ಲಿ ಅಡಿಕೆ ತೋಟದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿ ಕೊಂಡಿರುವುದಾಗಿ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ: ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಮಾಳ ಗ್ರಾಮದ ಬಾಲಾದ್ರಬೆಟ್ಟು ನಿವಾಸಿ ವಾಸುದೇವ ನಾಯಕ್ ಎಂಬವರ ಪತ್ನಿ ಸುಜಾತ ನಾಯಕ್ (37) ಎಂಬವರು ಮನನೊಂದು ಮಾ.8ರಂದು ಸಂಜೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಮಾಸೆಬೈಲು: ಮದುವೆಯಾಗದ ಮತ್ತು ಉದ್ಯೋಗ ಸಿಗದ ಚಿಂತೆಯಲ್ಲಿ ಮಾನಸಿಕವಾಗಿ ನೊಂದ ಮಡಾಮಕ್ಕಿ ಗ್ರಾಮದ ಕುಂಟಾಮಕ್ಕಿ ನಿವಾಸಿ ರಾಮ ನಾಯ್ಕ ಎಂಬವರ ಮಗ ಉದಯ ನಾಯ್ಕ ಎಂಬವರು ಮಾ.8ರಂದು ಮಡಾಮಕ್ಕಿಯ ಕೆಲರ್ಬೆಟ್ಟು ಹೊಳೆಯ ದಡದಲ್ಲಿರುವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಕಾರ್ಕಳ ಬಂಗ್ಲೆಗುಡ್ಡೆಯ ತ್ರಿವಿಕ್ರಮ ನಾಯಕ್(63) ಎಂಬವರು ಜೀವನದಲ್ಲಿ ಜುಗುಪ್ಸೆಗೊಂಡು ಮಾ.9 ರಂದು ಬೆಳಗ್ಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲ್ಲೂರು: ಹೊಟ್ಟೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಕೊಲ್ಲೂರು ಗ್ರಾಮದ ಸುಬ್ಬರಸನ ತೊಪ್ಲುವಿನ ತುಳಸಿಧರನ್ ಪೂಜಾರಿ ಎಂಬವರ ಮಗಳು ಸುನಿತಾ(38) ಎಂಬವರು ಮಾನಸಿಕವಾಗಿ ನೊಂದು ಮಾ.9ರಂದು ಬೆಳಗ್ಗೆ ಕೊಲ್ಲೂರು ಗ್ರಾಮದ ಹೆಗ್ಡೆ ಹಕ್ಲುವಿನ ತನ್ನ ವಾಸದ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







