ಉಡುಪಿ: ಲೋಕಾಯುಕ್ತ ಕೊಲೆಯತ್ನ ಖಂಡಿಸಿ ಧರಣಿ

ಉಡುಪಿ, ಮಾ. 9: ಲೋಕಾಯುಕ್ತ ವಿಶ್ವನಾಥ್ ಶೆಟ್ಟಿ ಕೊಲೆಯತ್ನ ಪ್ರಕರಣ ವನ್ನು ಖಂಡಿಸಿ ಅಖಿಲ ಕರ್ನಾಟಕ ನೆಲ ಜಲ ಪರಿಸರ ಸಂರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕ ಶುಕ್ರವಾರ ಅಜ್ಜರಕಾಡು ಭುಜಂಗ ಪಾರ್ಕ್‌ನ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಿತು.
ಲೋಕಾಯುಕ್ತ ಕೊಲೆಯತ್ನ ಪ್ರಕರಣದ ಆರೋಪಿಗೆ ಕಾನೂನು ವ್ಯಾಪ್ತಿಯಲ್ಲಿ ಕಠಿಣ ಶಿಕ್ಷೆ ವಿಧಿಸಬೇಕು ಮತ್ತು ಮುಂದೆ ದಕ್ಷ ಹಾಗೂ ಪ್ರಾಮಾಣಿಕ ಅಧಿ ಕಾರಿಗಳಿಗೆ ಹೆಚ್ಚಿನ ಭದ್ರತೆಯನ್ನು ಒದಗಿಸಬೇಕು ಎಂದು ವೇದಿಕೆಯ ಸ್ಥಾಪಕಾ ಧ್ಯಕ್ಷೆ ಶ್ರೀಲತಾ ಯು.ಶೆಟ್ಟಿ ಒತ್ತಾಯಿಸಿದರು.
ಬಳಿಕ ಈ ಕುರಿತ ಮನವಿಯನ್ನು ಎಸ್ಪಿ ಮೂಲಕ ಗೃಹ ಸಚಿವರಿಗೆ ಸಲ್ಲಿಸ ಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಅಂಬಲಪಾಡಿ ಉಮೇಶ್ ಕುಮಾರ್, ಮುಖಂಡರಾದ ರೇವತಿ, ನಿತ್ಯಾನಂದ ಶೆಟ್ಟಿ, ಉದಯ ಕುಮಾರ್ ಶೆಟ್ಟಿ, ಪ್ರಕಾಶ್ ಬ್ರಹ್ಮಾವರ, ಸುರೇಶ್ ನೇಜಾರು ಮೊದಲಾದವರು ಉಪಸ್ಥಿತರಿದ್ದರು.
Next Story





