ಮಾ. 11: ದ.ಕ. ಜಿಲ್ಲೆಯಾದ್ಯಂತ ಎರಡನೇ ಸುತ್ತಿನ ಪಲ್ಸ್ ಪೋಲಿಯೊ
ಮಂಗಳೂರು, ಮಾ.9: ಎರಡನೇ ಸುತ್ತಿನಲ್ಲಿ ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೊ ಕಾರ್ಯಕ್ರಮವು ಮಾ. 11ರಂದು ನಡೆಯಲಿದ್ದು, ತಾಲೂಕುವಾರು ಬೂತುಗಳ ಸಂಖ್ಯೆ ಹಾಗೂ ಮಕ್ಕಳ ಸಂಖ್ಯೆ ಕೆಳಗಿನಂತಿವೆ.
ಬಂಟ್ವಾಳ ತಾಲೂಕು - 190 ಬೂತ್‌ಗಳು, 31,562 ಮಕ್ಕಳು. ಬೆಳ್ತಂಗಡಿ ತಾಲೂಕು - 164 ಬೂತ್‌ಗಳು, 21,814 ಮಕ್ಕಳು. ಮಂಗಳೂರು ತಾಲೂಕು - 351 ಬೂತ್‌ಗಳು, 73,647 ಮಕ್ಕಳು. ಪುತ್ತೂರು ತಾಲೂಕು - 145 ಬೂತ್‌ಗಳು, 21,138 ಮಕ್ಕಳು.
ಸುಳ್ಯ ತಾಲೂಕು-75 ಬೂತ್‌ಗಳು, 10,856 ಮಕ್ಕಳು.ಒಟ್ಟು ಬೂತುಗಳ ಸಂಖ್ಯೆ -925, ಒಟ್ಟು ಮೊಬೈಲ್ ಬೂತುಗಳ ಸಂಖ್ಯೆ -9 (ಮಂಗಳೂರು (ಗ್ರಾ) 2, ಮಹಾನಗರ ಪಾಲಿಕೆ 4, ಪುತ್ತೂರು ನಗರ 1, ಸುಳ್ಯ 2).ಒಟ್ಟು ಟ್ರಾನ್ಸಿಟ್ ತಂಡ -26 (ಬಸ್‌ಸ್ಟಾಂಡ್, ರೈಲ್ವೇ ಸ್ಟೇಷನ್, ವಿಮಾನ ನಿಲ್ದಾಣಗಳಂತಹ ಸ್ಥಳಗಳಲ್ಲಿ ). ಹಿಂದಿನ ವರ್ಷಗಳ ಪಲ್ಸ್ ಪೋಲಿಯೊ ಕಾರ್ಯಕ್ರಮದ ವರದಿಯನ್ನು ಪರಾಮರ್ಶಿಸಿ ಈ ವರ್ಷ ಸದ್ರಿ ಕಾರ್ಯಕ್ರಮಕ್ಕೆ ಮೊಬೈಲ್ ಮತ್ತು ಟ್ರಾನ್ಸಿಟ್ ತಂಡಗಳ ಒಟ್ಟು ಮಕ್ಕಳ ಅಂದಾಜುಪಟ್ಟಿ ತಯಾರಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ 0-5 ವರ್ಷದ ಮಕ್ಕಳ ಸಂಖ್ಯೆ 1,59,017 ಮತ್ತು ಮೊಬೈಲ್/ಟ್ರಾನ್ಸಿಟ್ ತಂಡಗಳ ಅಂದಾಜು ಮಕ್ಕಳ ಸಂಖ್ಯೆ 8,087.
ಎಲ್ಲಾ ಪೋಷಕರಲ್ಲಿ ವಿನಂತಿ :- ಮಾ.11ರಂದು ಬೆಳಿಗ್ಗೆ 8 ಗಂಟೆಯಿಂದ 5 ಗಂಟೆವರೆಗೂ ಎರಡನೆ ಸುತ್ತಿನ ಪಲ್ಸ್ ಪೋಲಿಯೊ ಕಾರ್ಯಕ್ರಮ ನಡೆಯಲಿದ್ದು, 0-5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ 2 ಹನಿ ಪೋಲಿಯೊ ಹನಿ ಹಾಕಿಸಿ ಜೀವನ ಪೂರ್ತಿ ಪೋಲಿಯೊ ವಿರುದ್ಧ ಜಯ ಸಾಧಿಸುವುದನ್ನು ಮುಂದುವರಿ ಸೋಣ. ಪೋಲಿಯೊ ಹನಿಗಳನ್ನು ತಪ್ಪದೇ ತಮ್ಮ ಮಕ್ಕಳಿಗೆ (0-5) ಹಾಕಿಸುವುದನ್ನು ಮರೆಯದಿರಿ. ಬಿಸಿಲಿನ ತಾಪ ಜಾಸ್ತಿ ಇರುವುದರಿಂದ ಎಲ್ಲಾ ಪೋಷಕರು ತಮ್ಮ ಮುದ್ದು ಕಂದಮ್ಮಗಳಿಗೆ ಬೆಳಗ್ಗೆ ಬೇಗನೆ ಬಂದು ಪೋಲಿಯೊ ಹನಿಗಳನ್ನು ಹಾಕಿಸಿಕೊಳ್ಳಬೇಕಾಗಿ ಜಿಲ್ಲಾ ಆರ್.ಸಿ.ಎಚ್ ಅಧಿಕಾರಿಗಳ ಪ್ರಕಟನೆ ತಿಳಿಸಿದೆ.







