ಚಿಕ್ಕಮಗಳೂರು : ಅಮೆಝಾನ್ ಕಂಪೆನಿಗೆ ಕೋಟ್ಯಂತರ ರೂ. ವಂಚಿಸಿದ 8 ಮಂದಿಯ ಬಂಧನ
ಇವರು ಮಾಡಿದ್ದೇನು ಗೊತ್ತೇ?

ಚಿಕ್ಕಮಗಳೂರು, ಮಾ. 9:ನಗರದ ಅಮೆಝಾನ್ ಕಂಪೆನಿಯ ಸಿಬ್ಬಂದಿಯೇ ಕೋಟ್ಯಂತರ ರೂ. ವಂಚಿಸಿರುವ ಘಟನೆ ನಡೆದಿದ್ದು, ಐವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣ ಸಂಬಂಧ ಅಮೆಝಾನ್ ಸಿಬ್ಬಂದಿ ದರ್ಶನ್ ಸೇರಿದಂತೆ ಒಟ್ಟು 8 ಮಂದಿಯನ್ನು ಚಿಕ್ಕಮಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ವಿಚಾರಣೆ ನಡೆಸಿದಾಗ ಶೋಕಿಗಾಗಿ ವಸ್ತುಗಳನ್ನು ಡೆಲಿವರಿ ಮಾಡದಿರುವುದಾಗಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಪ್ರಕರಣದ ವಿವಿರ: ನಗರದ ಗ್ರಾಹಕರೊಬ್ಬರು ಅಮೆಝಾನ್ ಕಂಪೆನಿಯಲ್ಲಿ ಬುಕ್ ಮಾಡಿರುವ ವಸ್ತುಗಳು ಮನೆಗೆ ತಲುಪುತ್ತಿಲ್ಲ ಎಂದು ನಗರ ಪೊಲೀಸರಿಗೆ ದೂರು ನೀಡಿದ್ದರು.
ಗ್ರಾಹಕರ ದೂರು ಆಧರಿಸಿ ಕಾಳಿದಾಸ ನಗರದ ಅಮೆಝಾನ್ ಕಚೇರಿಗೆ ದಾಳಿ ನಡೆಸಿದ ಪೊಲೀಸರು ಕಚೇರಿಯ ಒಳಗೆ ವಿತರಣೆಯ ದಿನಾಂಕ ಮುಗಿದಿದ್ದರೂ ಮನೆಗಳಿಗೆ ಡೆಲಿವರಿ ಮಾಡದ ಅಮೆಝಾನ್ ಕಂಪೆನಿಯ ಮುದ್ರೆ ಇರುವ ಸುಮಾರು ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಅಲ್ಲದೆ, ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ದರ್ಶನ್ ಸೇರಿದಂತೆ ಸುಮಾರು 8 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.





