ಬಂಡುಕೋರರಿಂದ ಮಹಿಳೆಯರ ಸಾಮೂಹಿಕ ಅತ್ಯಾಚಾರ

ಅಬಿಡ್ಜನ್ (ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್), ಮಾ. 9: ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ ದೇಶದ ದುರ್ಗಮ ಪ್ರದೇಶವೊಂದರಲ್ಲಿ ಬಂಡುಕೋರರು ಕಳೆದ ತಿಂಗಳು ಮಹಿಳೆಯರನ್ನು ಸಾಮೂಹಿಕವಾಗಿ ಅಪಹರಿಸಿ ಅತ್ಯಾಚಾರಗೈದಿದ್ದಾರೆ ಎಂದು ಮೆಡಿಸಿನ್ಸ್ ಸಾನ್ಸ್ ಫ್ರಂಟಿಯರ್ಸ್ (ಎಂಎಸ್‌ಎಫ್) ಗುರುವಾರ ಹೇಳಿದೆ.
ದೇಶದ ವಾಯುವ್ಯ ಭಾಗದ ಕಿರಿವಿರಿ ಗ್ರಾಮದ ಸಮೀಪ ಫೆಬ್ರವರಿ 17ರಂದು ನಡೆದ ಹಿಂಸಾಚಾರದ 10 ಸಂತ್ರಸ್ತೆಯರಿಗೆ ಅಂತಾರಾಷ್ಟ್ರೀಯ ವೈದ್ಯಕೀಯ ನೆರವು ಸಂಘಟನೆ (ಎಂಎಸ್‌ಎಫ್) ಚಿಕಿತ್ಸೆ ನೀಡಿದೆ.
ಆಸ್ಪತ್ರೆಗೆ ದಾಖಲಾದರೆ ಅವರು ಮತ್ತೆ ದಾಳಿ ನಡೆಸಬಹುದು ಎಂಬ ಭೀತಿಯಿಂದ ಸಂತ್ರಸ್ತ ಮಹಿಳೆಯರು ಎರಡು ವಾರಗಳ ಕಾಲ ಚಿಕಿತ್ಸೆಯಿಂದ ವಂಚಿತರಾಗಿದ್ದರು ಎಂದಿದೆ.
2013ರಿಂದ ಈ ದೇಶದಲ್ಲಿ ಅರಾಜಕತೆ ನೆಲೆಸಿದೆ.
Next Story





