ಎನ್.ಆರ್.ಐ. ಯೂತ್ ಕಾಂಗ್ರೆಸ್ ಜಿದ್ದಾ ಘಟಕ: ಚುಣಾವಣಾ ಪ್ರಚಾರ ಸಭೆ

ಜಿದ್ದಾ, ಮಾ. 9: ಮುಂಬರುವ ಸಾರ್ವತ್ರಿಕಾ ವಿಧಾನಸಭಾ ಚುಣಾವಣೆ 2018 ಕರ್ನಾಟಕದ ರಾಜ್ಯಾದ್ಯಂತ ಏಕಕಾಲದಲ್ಲಿ ನಡೆಯಲಿರುವ ಚುಣಾವಣೆ ಪ್ರಚಾರಾರ್ಥವಾಗಿ ಎನ್.ಆರ್.ಐ ಯೂತ್ ಕಾಂಗ್ರೆಸ್ ಜಿದ್ದಾ ವತಿಯಿಂದ ಬೃಹತ್ ಪ್ರಚಾರ ಸಭೆ ಹಮ್ಮಿಕೊಳ್ಳಲಾಗಿತ್ತು.
ಎನ್.ಆರ್.ಐ. ಯೂತ್ ಕಾಂಗ್ರೆಸ್ ತಾಯಿಫ್ ಘಟಕದ ಅಧ್ಯಕ್ಷ ಇಬ್ರಾಹಿಮ್ ಕನ್ನಂಗಾರ್ ಅಧ್ಯಕ್ಷತೆ ವಹಿಸಿದ್ದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ಐದು ವರ್ಷದ ಅವಧಿಯಲ್ಲಿ ಮಾಡಿದ ಸಾಧನೆಯು ಬೇರೆ ಎಲ್ಲಾ ರಾಜ್ಯಗಳಿಗೆ ಮಾದರಿಯಾಗಿದೆ. ಬಡವರಿಗೆ ಕೈಗೆಟುವ ದರದಲ್ಲಿ ತೆರೆದ ಇಂದಿರಾ ಕ್ಯಾಂಟೀನ್ ಯೋಜನೆಯು ಸಾಮಾನ್ಯ ಜನರಿಗೆ ಅತ್ಯುತ್ತಮ ಪಲಫ್ರದ ಯೋಜನೆಯಾಗಿದೆ ಎಂದರು. ಅದೇ ರೀತಿ ಅನ್ನಭಾಗ್ಯ ಮಾತ್ರವಲ್ಲದೆ ಅನಿವಾಸಿ ಭಾರತೀಯರಿಗಾಗಿ ಕರ್ನಾಟಕ ಸರಕಾರದಿಂದ ಉಪಯೋಗ ವಾಗುವಂತಹ ವಿಶೇಷವಾದ ಯೋಜನೆಯನ್ನು ಅತೀ ಶೀಘ್ರದಲ್ಲಿ ಸಚಿವ ಮತ್ತು ಶಾಸಕರ ಮುಖಾಂತರ ಹೊರಡಿಸಲಾಗುವುದು, ಕೇಂದ್ರದಲ್ಲಿ ಆಡಳಿತವಿರುವ ಬಿಜೆಪಿ ಸರಕಾರವು ಬಡವರನ್ನು ತೀರಾ ಕಡೆಗಣಿಸಿ ಶ್ರೀಮಂತರನ್ನು ಮಾತ್ರ ದಡ ಸೇರಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಸಭೆಯಲ್ಲಿ ಎನ್.ಆರ್.ಐ. ತಾಯಿಫ್ ಘಟಕದ ಉಪಾಧ್ಯಕ್ಷ ಇಂತಿಯಾಝ್ ಕುಂದಾಪುರ, ಪ್ರಧಾನ ಕಾರ್ಯದರ್ಶಿ ಅಬೂಬಕರ್ ಕಡಬ, ಸಂಚಾಲಕರಾದ ಮಲಿಕ್ ಇಡ್ಯ, ಯೂನುಸ್ ಸೀಕೊ, ಎನ್.ಆರ್.ಐ. ಯೂತ್ ಕಾಂಗ್ರೆಸ್ ಜಿದ್ದಾ ಘಟಕದ ಪ್ರಧಾನ ಕಾರ್ಯದರ್ಶಿ ಆಸಿಫ್ ಬೇಳೂರು, ಉಪಾಧ್ಯಕ್ಷ ಜಾವಿದ್ ಕಲ್ಲಡ್ಕ, ಅಬೂಬಕರ್ ಸಿದ್ದೀಕ್ ಬಾಳೆಹಣ್ಣೂರ್, ಆಸಿಫ್ ಗುರುಪುರ ಅಮಾನ್ ವಾಮಂಜೂರು ಹಾಗು ಇತರರು ಉಪಸ್ಥಿತರಿದ್ದರು.





