ಟೆಸ್ಟ್ ಕ್ರಿಕೆಟ್‌ನಿಂದ ಕಾಲಿನ್ ಮುನ್ರೊ ನಿವೃತ್ತಿ

ವೆಲ್ಲಿಂಗ್ಟನ್, ಮಾ.9: ಟ್ವೆಂಟಿ-20 ಹಾಗೂ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಹೆಚ್ಚು ಗಮನ ನೀಡುವ ಉದ್ದೇಶದಿಂದ ನ್ಯೂಝಿಲೆಂಡ್‌ನ ಆರಂಭಿಕ ದಾಂಡಿಗ ಕಾಲಿನ್ ಮುನ್ರೊ ಟೆಸ್ಟ್ ಕ್ರಿಕೆಟ್ ತ್ಯಜಿಸಲು ನಿರ್ಧರಿಸಿದ್ದಾರೆ.
ದಕ್ಷಿಣ ಆಫ್ರಿಕ ಸಂಜಾತ ಮುನ್ರೊ 2013ರಲ್ಲಿ ದಕ್ಷಿಣ ಆಫ್ರಿಕದ ವಿರುದ್ಧ ನ್ಯೂಝಿಲೆಂಡ್ ಪರ ಏಕೈಕ ಟೆಸ್ಟ್ ಪಂದ್ಯ ಆಡಿದ್ದರು. ಇದೀಗ ಅವರು ನ್ಯೂಝಿಲೆಂಡ್‌ನ ದೇಶೀಯ ಚತುರ್ದಿನ ಟೂರ್ನಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಮುನ್ರೊ 48 ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 51.58ರ ಸರಾಸರಿಯಲ್ಲಿ 3,611 ರನ್ ಗಳಿಸಿದ್ದಾರೆ. ‘‘ಈ ವರ್ಷ ನಾನು ನಾಲ್ಕು ದಿನಗಳ ಕ್ರಿಕೆಟ್‌ನತ್ತ ಹೆಚ್ಚು ಗಮನ ನೀಡಲಾರೆ. ಮುಂದಿನ ವರ್ಷ ಏಕದಿನ ವಿಶ್ವಕಪ್ ನಡೆಯಲಿದೆ. ಈ ಹಿನ್ನೆಲೆಯಲ್ಲಿ ವಿಶ್ವಕಪ್ ತಯಾರಿ ನಡೆಸುವತ್ತ ಹೆಚ್ಚು ಗಮನ ಹರಿಸುವೆ’’ ಎಂದು ವಿಶ್ವ ಟ್ವೆಂಟಿ-20 ಕ್ರಿಕೆಟ್‌ನ ಅಗ್ರ ರ್ಯಾಂಕಿನ ಬ್ಯಾಟ್ಸ್‌ಮನ್ ಮುನ್ರೊ ಹೇಳಿದ್ದಾರೆ.
Next Story





