Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ತಾ ಮಾಡುವ ಕೃಷಿ

ತಾ ಮಾಡುವ ಕೃಷಿ

ವಾರ್ತಾಭಾರತಿವಾರ್ತಾಭಾರತಿ10 March 2018 12:02 AM IST
share
ತಾ ಮಾಡುವ ಕೃಷಿ

ತಾ ಮಾಡುವ ಕೃಷಿಯ ಮಾಡುವನ್ನಬರ ಮಾಡಿ,

ಕೃಷಿ ತೀರಿದ ಮತ್ತೆ ಗುರುದರ್ಶನ, ಲಿಂಗಪೂಜೆ, ಜಂಗಮಸೇವೆ

ಶಿವಭಕ್ತರ ಸುಖಸಂಭಾಷಣೆ, ಶರಣರ ಸಂಗ

ಈ ನೇಮವನರಿವುತಿಪ್ಪುದು ಸದ್ಭಕ್ತನ ಸದಾತ್ಮನ ಯುಕ್ತಿ.

ಆಚಾರವೇ ಪ್ರಾಣವಾಗಿಪ್ಪರಾಮೇಶ್ವರಲಿಂಗಕ್ಕೆ

ಆತನೇ ಚೇತನಭಾವ.

                                        -ಅಕ್ಕಮ್ಮ

ಕೆಳವರ್ಗದ ವಚನಕಾರ್ತಿ ಅಕ್ಕಮ್ಮ ಕಲಬುರಗಿ ಜಿಲ್ಲೆಯ ಯಾದಗಿರಿ ತಾಲೂಕಿನ ಯಲೇರಿ ಗ್ರಾಮದವಳು ಎಂದು ಊಹಿಸಲಾಗಿದೆ. ಶೀಲ, ವ್ರತ, ನೇಮ ಮತ್ತು ಆಚಾರಗಳು ಈಕೆಗೆ ಅತ್ಯಂತ ಪ್ರಿಯವಾದವುಗಳು. ಕಾಯಕದಲ್ಲಿ ನಿರತರಾದ ರೈತರು ಕೃಷಿಕಾರ್ಯಗಳನ್ನು ಪೂರ್ತಿಗೊಳಿಸಿದ ನಂತರ ಉಳಿದ ಸಮಯವನ್ನು ಅರ್ಥಪೂರ್ಣವಾಗಿಸಬೇಕು ಎಂದು ಹೇಳುವ ಮೂಲಕ ಅಕ್ಕಮ್ಮ ಕಾಯಕಕ್ಕೆ ಮೊದಲ ಸ್ಥಾನ ನೀಡುತ್ತಾಳೆ. ಆದರೆ ಕಾಯಕದ ನಂತರ ಏನು ಮಾಡಬೇಕು ಎಂದು ತಿಳಿಸುವುದು ಈ ವಚನದ ವೈಶಿಷ್ಟ್ಯವಾಗಿದೆ.

ಅಕ್ಕಮ್ಮ ‘ಕಾಯಕ ಮತ್ತು ಅರಿವು’ ಕುರಿತು ಹೇಳುತ್ತಾಳೆ. ಕೃಷಿಕರು ಕೃಷಿಕಾರ್ಯ ಮಾಡುವುದರ ಮೂಲಕ ಕಾಯಕನಿಷ್ಠೆಯನ್ನು ತೋರುವರು. ನಂತರ ಅವರು ಗುರುದರ್ಶನ, ಲಿಂಗಪೂಜೆ, ಜಂಗಮಸೇವೆ, ಶಿವಭಕ್ತರ ಸುಖಸಂಭಾಷಣೆ ಮತ್ತು ಶರಣರ ಸಂಗವನ್ನು ಹೊಂದುವುದರ ಮೂಲಕ ಅರಿವನ್ನು ವಿಸ್ತರಿಸಿಕೊಳ್ಳಬೇಕು ಎಂಬುದು ಅಕ್ಕಮ್ಮನ ಆಶಯವಾಗಿದೆ. ಕಾಯಕ ಜೀವಿಗಳೆಲ್ಲ ತಮ್ಮ ತಮ್ಮ ಕಾಯಕದ ಅನುಭವದ ಮೂಲಕವೇ ಅನುಭಾವಿಗಳಾಗಿ ಅರಿವುಳ್ಳವರಾದರು. ತಮ್ಮ ನಿತ್ಯ ಕಾಯಕದ ವಸ್ತುಗಳನ್ನೇ ಸಾಂಕೇತಿಕವಾಗಿ ಬಳಸುತ್ತ ಆತ್ಮಜ್ಞಾನದ ವಚನಗಳನ್ನು ಬರೆದರು. ಕಾಯಕದ ಅನುಭವದ ಮೂಲಕ ಶರಣಧರ್ಮದ ದರ್ಶನ ಮಾಡಿಸಿದರು. ಇದು ಹೇಗೆ ಸಾಧ್ಯವಾಯಿತೆಂದರೆ ಅವರು ತಮ್ಮ ಬಿಡುವಿನ ವೇಳೆಯಲ್ಲಿ ಶಿವಜ್ಞಾನಕ್ಕಾಗಿ ಗುರುವಿನ ದರ್ಶನ ಮಾಡುತ್ತಿದ್ದರು. ಏಕಾಗ್ರತೆಯೊಂದಿಗೆ ಮನಸ್ಸನ್ನು ದೇವರಲ್ಲಿ ತಲ್ಲೀನಗೊಳಿಸುವುದಕ್ಕಾಗಿ ಇಷ್ಟಲಿಂಗ ಪೂಜೆ ಮಾಡುತ್ತಿದ್ದರು. ಆ ಮೂಲಕ ಮನಸ್ಸನ್ನು ಅನಿಷ್ಟದಿಂದ ಪಾರು ಮಾಡಿ ಮಂಗಳಮಯವಾಗಿಸುತ್ತಿದ್ದರು. ಶಿವಭಕ್ತರ ಜೊತೆ ತಾತ್ತ್ವಿಕ ಮತ್ತು ಸಾತ್ವಿಕ ಚಿಂತನೆ ಮಾಡುತ್ತಿದ್ದರು. ಶರಣರ ಸಂಗದಲ್ಲಿರುತ್ತಿದ್ದರು. ಇವೆಲ್ಲವನ್ನು ನೇಮ (ನಿಯಮ)ದಂತೆ ಪಾಲಿಸುತ್ತಿದ್ದರು. ಈ ನೇಮವನ್ನು ಅರಿತುಕೊಳ್ಳುವುದೇ ಸದಾತ್ಮನಾದಂಥ ಸದ್ಭಕ್ತನ ಔಚಿತ್ಯಪ್ರಜ್ಞೆ.

ಈ ಔಚಿತ್ಯಪ್ರಜ್ಞೆ ನಮ್ಮ ರೈತಾಪಿ ಜನರಲ್ಲಿ ಕೂಡ ಮೂಡಬೇಕೆಂಬ ಅಕ್ಕಮ್ಮನ ಕಾಳಜಿ ಅನುಕರಣೀಯವಾಗಿದೆ. ಇದನ್ನವರು ನೇಮದ ಹಾಗೆ ಪಾಲಿಸಬೇಕು ಎಂದು ಅಕ್ಕಮ್ಮ ಬಯಸುತ್ತಾಳೆ. ಆಚಾರವೇ ಪ್ರಾಣವಾಗಿರುವಂಥ ತನ್ನ ಇಷ್ಟಲಿಂಗವಾದ ರಾಮೇಶ್ವರ ಲಿಂಗಕ್ಕೆ ಇಂಥ ಕಾಯಕ ಮತ್ತು ಅರಿವಿನ ವ್ಯಕ್ತಿತ್ವವುಳ್ಳಾತ ಚೈತನ್ಯದ ಚಿಲುಮೆಯಾಗಿರುತ್ತಾನೆ ಎಂದು ಭಾವಪೂರ್ಣವಾಗಿ ಹೇಳುತ್ತಾಳೆ. ಪ್ರತಿಯೊಬ್ಬರು ತಮ್ಮ ಬದುಕಿನ ಸರ್ವಾಂಗೀಣ ವಿಕಾಸಕ್ಕೆ ಇಂಥ ನೇಮಗಳನ್ನು ಹಾಕಿಕೊಂಡು ಅವುಗಳನ್ನು ಆಚರಣೆಯಲ್ಲಿ ತರಬೇಕು. ಇವು ಹಾಲನೇಮ, ಹಾಲಕೆನೆಯ ನೇಮದಂಥಲ್ಲ. ನೈತಿಕತೆಯ ನೇಮಗಳು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X