ಬೈಂದೂರು ಸಮುದಾಯ ಕೇಂದ್ರವನ್ನು ತಾಲೂಕು ಆಸ್ಪತ್ರೆಯನ್ನಾಗಿಸಲು ಆಗ್ರಹಿಸಿ ಧರಣಿ

ಬೈಂದೂರು, ಮಾ.10: ಬೈಂದೂರು ಸಮುದಾಯ ಆರೋಗ್ಯ ಕೇಂದ್ರವನ್ನು ಸುಸಜ್ಜಿತ ತಾಲೂಕು ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸುವಂತೆ ಆಗ್ರಹಿಸಿ ಸಿಪಿಐಎಂ ಬೈಂದೂರು ವಲಯ ಸಮಿತಿಯ ನೇತೃತ್ವದಲ್ಲಿ ಹಕ್ಕೊತ್ತಾಯ ಪ್ರತಿಭಟನಾ ಪ್ರದರ್ಶನವನ್ನು ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ಎದುರುಗಡೆ ಮಾ.9ರಂದು ನಡೆಸಲಾಯಿತು.
ಬೈಂದೂರಿನ ಸುತ್ತಲಿನ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಅತ್ಯಗತ್ಯವಾಗಿ ಬೇಕಾಗಿರುವ ಹೆರಿಗೆ ವಿಭಾಗ ಆರಂಭಿಸಿ, ಮಹಿಳಾ ತಜ್ಞೆ ವೈದ್ಯರನ್ನು ನೇಮಕ ಮಾಡಬೇಕು. ಸರಕಾರದ ಮಂಜೂರಾತಿ 48 ಹುದ್ದೆಗಳಲ್ಲಿ ಖಾಲಿ ಇರುವ 28 ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಲು ಕ್ರಮಕೈಗೊಳ್ಳಬೇಕು. ಹೊರ ಗುತ್ತಿಗೆ ನೌಕರರಿಗೆ ಸರಕಾರಿ ನೌಕರರಿಗೆ ಸಿಗುವ ಎಲ್ಲಾ ಕಾನೂನು ಬದ್ಧ ಸೌಲಭ್ಯ ಕೊಡಿಸಬೇಕು. ಹೊರಗುತಿತಿಗೆ ಪದ್ಧತಿ ರದ್ದುಗೊಳಿಸಬೇಕು ಎಂದು ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಆಗ್ರಹಿಸಿದರು.
ಅರವಳಿಕೆ ತಜ್ಞರು, ಕಛೇರಿ ಅಧೀಕ್ಷಕರು, ಗುಮಾಸ್ತ/ಟೈಪಿಸ್ಟ್ ನೇತ್ರಾಧಿಕಾರಿ, ಕಿರಿಯ ವೈದ್ಯಕೀಯ, ಕ್ಷಕಿರಣ ತಂತ್ರಜ್ಞರು, ಹಿರಿಯ ಪುರುಷ ಆರೋಗ್ಯ ಸಹಾಯಕ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ(5 ಹುದ್ದೆ) ಪುರುಷ ಆರೋಗ್ಯ ಸಹಾಯಕ ಒಟ್ಟು 27 ಹುದ್ದೆಯನ್ನು ಕೂಡಲೇ ಭತಿರ್ರ್ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಮುಖಂಡರಾದ ವೆಂಕಟೇಶ ಕೋಣಿ, ಗಣೇಶ ತೊಂಡೆಮಕ್ಕಿ, ನಾಗರತ್ನ ನಾಡ ಮೊದಲಾದವರು ಉಪಸ್ಥಿತರಿದ್ದರು.







