ವಿದ್ವತ್ ಮೇಲೆ ಹಲ್ಲೆ ಪ್ರಕರಣ: ಮಲ್ಯ ಆಸ್ಪತ್ರೆ ವೈದ್ಯರಿಗೆ ಸಿಸಿಬಿ ನೋಟಿಸ್

ಬೆಂಗಳೂರು, ಮಾ.10: ಶಾಂತಿನಗರ ಶಾಸಕ ಎನ್.ಎ.ಹಾರಿಸ್ ಪುತ್ರ ಮುಹಮ್ಮದ್ ನಲಪಾಡ್‌ನಿಂದ ಹಲ್ಲೆಗೊಳಗಾದ ವಿದ್ವತ್‌ಗೆ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಮನೆಗೆ ಕಳುಹಿಸುವ ವೇಳೆ ನೀಡುವ ಆರೋಗ್ಯದ ವಿವರ(ಡಿಸ್‌ಚಾರ್ಜ್ ಸಮ್ಮರಿ)ವನ್ನು ಬಹಿರಂಗ ಪಡಿಸಿರುವುದಕ್ಕೆ ಮಲ್ಯ ಆಸ್ಪತ್ರೆ ವೈದ್ಯ ಡಾ.ಆನಂದ್ ಅವರಿಗೆ ಸಿಸಿಬಿ ನೋಟಿಸ್ ನೀಡಿದೆ.
ವಿದ್ವತ್ ಆಸ್ಪತ್ರೆಯಿಂದ ಹೊರಬರುವ ವರದಿ ಶಾಸಕ ಹಾರಿಸ್ ಅವರಿಗೆ ಹೇಗೆ ಸಿಕ್ಕಿತು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಗೊಂಡಿರುವುದು ಹೇಗೆ ಎಂದೆಲ್ಲಾ ಪ್ರಶ್ನಿಸಿ ನೋಟಿಸ್ ನೀಡಿ, ಉತ್ತರಿಸುವಂತೆ ಸೂಚಿಸಿದ್ದಾರೆ.
ವೈದ್ಯಕೀಯ ವರದಿಯನ್ನು ನೀಡುವಂತೆ ಪ್ರಕರಣ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಯೊಬ್ಬರು ಕೇಳಿದ್ದರೂ, ಸಾಮಾಜಿಕ ಜಾಲ ತಾಣಗಳಿಗೆ ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಡಾ.ಆನಂದ್ ಅವರ ಉತ್ತರ ನೋಡಿಕೊಂಡು ಮೊಕದ್ದಮೆ ದಾಖಲಿಸಲಾಗುವುದೆಂದು ಸಿಸಿಬಿಯ ಜಂಟಿ ಪೊಲೀಸ್ ಆಯುಕ್ತ ಸತೀಶ್‌ಕುಮಾರ್ ಹೇಳಿದ್ದಾರೆ.
Next Story





