ವಾಯು ಪಡೆಯ ನಿವೃತ್ತ ಸಿಬ್ಬಂದಿ, ಪತ್ನಿಯ ಕತ್ತು ಸೀಳಿ ಕೊಲೆ
ಸಾಂದರ್ಭಿಕ ಚಿತ್ರ
ಭೋಪಾಲ, ಮಾ. 10: ವಾಯು ಪಡೆಯ ನಿವೃತ್ತ ಸಿಬ್ಬಂದಿ ಹಾಗೂ ಅವರ ಪತ್ನಿಯ ಮೃತದೇಹ ಕತ್ತು ಸೀಳಿದ ಸ್ಥಿತಿಯಲ್ಲಿ ಶನಿವಾರ ಪತ್ತೆಯಾಗಿದೆ.
ಮೃತಪಟ್ಟ ದಂಪತಿಯನ್ನು ವಾಯು ಪಡೆಯ ನಿವೃತ್ತ ಸಿಬ್ಬಂದಿ ಜಿ.ಕೆ. ನಾಯರ್ (70) ಹಾಗೂ ಅವರ ಪತಿ ಗೋಮತಿ (68) ಎಂದು ಗುರುತಿಸಲಾಗಿದೆ. ಕತ್ತು ಸೀಳಿದ ಸ್ಥಿತಿಯಲ್ಲಿದ್ದ ಅವರ ಮೃತದೇಹ ಅವಧಾಪುರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ನರ್ಮದಾ ಗ್ರೀನ್ ವ್ಯಾಲಿ ರೆಸಿಡೆನ್ಸಿಯ ಫ್ಲಾಟ್ನಲ್ಲಿ ಪತ್ತೆಯಾಗಿದೆ ಎಂದು ಭೋಪಾಲದ ಉಪ ಪೊಲೀಸ್ ಅಧೀಕ್ಷಕ ಧರ್ಮೇಂದ್ರ ಚೌಧುರಿ ಹೇಳಿದ್ದಾರೆ. ಬಾಗಿಲು ಬಡಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬರದ ಹಿನ್ನೆಲೆಯಲ್ಲಿ ಕೆಲಸಗಾರ್ತಿ ನೆರೆಹೊರೆಯವರಿಗೆ ವಿಷಯ ತಿಳಿಸಿದ್ದರು. ಸ್ಥಳೀಯರೊಬ್ಬರು ಕಿಟಕಿಯಿಂದ ಇಣುಕಿ ನೋಡಿದಾಗ ದಂಪತಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂತು. ಅವರ ಕತ್ತನ್ನು ಹರಿತವಾದ ಆಯುಧದಿಂದ ಸೀಳಲಾಗಿತ್ತು ಎಂದು ಅವರು ತಿಳಿಸಿದ್ದಾರೆ. ಮನೆಯಲ್ಲಿದ್ದ ವೌಲ್ಯಯುತ ಸೊತ್ತುಗಳು ನಾಪತ್ತೆಯಾಗಿಲ್ಲ. ಆದುದರಿಂದ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.