ನಾನು ಪ್ರಧಾನಿಯಾಗಿದ್ದರೆ ನೋಟ್ ಬ್ಯಾನ್ ಪ್ರಸ್ತಾಪವನ್ನು…
ಮಲೇಷ್ಯಾದಲ್ಲಿ ರಾಹುಲ್ ಹೇಳಿದ್ದೇನು?

ಹೊಸದಿಲ್ಲಿ, ಮಾ,10: ನೋಟ್ ಬ್ಯಾನ್ ಒಂದು ತಪ್ಪು ನಿರ್ಧಾರವಾಗಿದ್ದು, ಒಂದು ವೇಳೆ ತಾನು ಪ್ರಧಾನಿಯಾಗಿದ್ದಿದ್ದರೆ ನೋಟ್ ಬ್ಯಾನ್ ಪ್ರಸ್ತಾಪವನ್ನು ಕಸದ ಬುಟ್ಟಿಗೆ ಎಸೆಯುತ್ತಿದ್ದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಆಗ್ನೇಯ ಏಷ್ಯಾದ ದೇಶಗಳಿಗೆ 5 ದಿನಗಳ ಪ್ರವಾಸದಲ್ಲಿರುವ ರಾಹುಲ್ ಮಲೇಷ್ಯಾಗೆ ಭೇಟಿ ನೀಡಿ ಅಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು.
ನೋಟ್ ಅಮಾನ್ಯ ಕ್ರಮವನ್ನು ನೀವು ಹೇಗೆ ವಿಭಿನ್ನ ರೀತಿಯಲ್ಲಿ ಜಾರಿಗೊಳಿಸುತ್ತಿದ್ದಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ರಾಹುಲ್, “ಒಂದು ವೇಳೆ ನಾನು ಪ್ರಧಾನಿಯಾಗಿರುತ್ತಿದ್ದರೆ, ನೋಟು ಅಮಾನ್ಯದ ನಡೆಯ ಬಗ್ಗೆ ಬರೆದ ಫೈಲನ್ನು ಯಾರಾದರೂ ನನಗೆ ನೀಡಿದ್ದರೆ ನಾನು ಅದನ್ನು ಕಸದ ಬುಟ್ಟಿಗೆ ಎಸೆಯುತ್ತಿದ್ದೆ” ಎಂದು ರಾಹುಲ್ ಹೇಳಿದ್ದಾರೆ.
“ಯಾರಿಗೂ ಒಳ್ಳೆಯದಲ್ಲದ ನೋಟು ಅಮಾನ್ಯ ನಡೆಯ ಬಗ್ಗೆ ನಾನು ಇದೇ ನಿರ್ಧಾರವನ್ನು ಕೈಗೊಳ್ಳುತ್ತಿದ್ದೆ” ಎಂದವರು ಹೇಳಿದರು.
Next Story





