ದ್ವಿತೀಯ ಪಿಯುಸಿ ಪರೀಕ್ಷೆ: 146 ಮಂದಿ ಗೈರು
ಉಡುಪಿ, ಮಾ.9: ಶನಿವಾರ ಜಿಲ್ಲೆಯಲ್ಲಿ ನಡೆದ ಈ ಸಾಲಿನ ದ್ವಿತೀಯ ಪಿಯುಸಿಯ ಎರಡು ವಿಷಯಗಳ ಪರೀಕ್ಷೆಗಳಿಗೆ ಒಟ್ಟು 146 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು ಎಂದು ಜಿಲ್ಲಾ ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆಯ ಪ್ರಕಟಣೆ ತಿಳಿಸಿದೆ.
ಇತಿಹಾಸ ಪರೀಕ್ಷೆಗೆ 6280 ವಿದ್ಯಾರ್ಥಿಗಳು ಹೆಸರು ನೊಂದಾಯಿಸಿ ಕೊಂಡಿದ್ದು ಇವರಲ್ಲಿ 131 ಮಂದಿ ಗೈರುಹಾಜರಾಗಿದ್ದರೆ, ಸಂಖ್ಯಾಶಾಸ್ತ್ರ ಪರೀಕ್ಷೆಗೆ ಹೆಸರು ನೊಂದಾಯಿಸಿಕೊಂಡ 2804 ವಿದ್ಯಾರ್ಥಿಗಳಲ್ಲಿ 2789 ಮಂದಿ ಹಾಜರಾಗಿ 15 ಮಂದಿ ಗೈರುಹಾಜರಾಗಿದ್ದರು.
ಶುಕ್ರವಾರ ನಡೆದ 3 ಪರೀಕ್ಷೆಗಳಿಗೆ ಒಟ್ಟು ನಾಲ್ವರು ಗೈರುಹಾಜರಾಗಿದ್ದರು. ಶಿಕ್ಷಣ ವಿಷಯಕ್ಕೆ ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 17 ಮಂದಿ ಹೆಸರು ನೊಂದಾಯಿಸಿದ್ದು, 14 ಮಂದಿ ಹಾಜರಾಗಿದ್ದರು. ತರ್ಕಶಾಸ್ತ್ರ ವಿಷಯಕ್ಕೆ ಕುಂದಾಪುರ ಭಂಡಾರ್‌ಕಾರ್ಸ್ ಪ.ಪೂ.ಕಾಲೇಜಿನ 30ಮಂದಿ ಹೆಸರು ನೊಂದಾಯಿಸಿ 29 ಮಂದಿ ಪರೀಕ್ಷೆ ಬರೆದಿದ್ದಾರೆ.
ಗೃಹವಿಜ್ಞಾನ ವಿಷಯದಲ್ಲಿ ಬಿದ್ಕಲ್‌ಕಟ್ಟೆ ಸರಕಾರಿ ಪ.ಪೂ. ಕಾಲೇಜಿನಲ್ಲಿ ಎಲ್ಲಾ 9 ಮಂದಿ ಪರೀಕ್ಷೆಗೆ ಹಾಜರಾಗಿದ್ದರು ಎಂದು ಪ್ರಕಟಣೆ ತಿಳಿಸಿದೆ.







