ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ನ್ಯಾಪ್ಕಿನ್ ವಿತರಣೆ ಮೆಷಿನ್ ಸ್ಥಾಪನೆ

ಹೈದರಾಬಾದ್, ಮಾ. 10: ಮಹಿಳಾ ಪ್ರಯಾಣಿಕರು ಆರಾಮವಾಗಿರಲು ಹಾಗೂ ಸ್ಪಚ್ಚ ಅಭ್ಯಾಸ ಉತ್ತೇಜಿಸಲು ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ವಿತರಿಸುವ ಮೆಷಿನ್‌ಗಳನ್ನು ಅಳವಡಿಸಲಾಗಿದೆ. ಈ ಮೆಷಿನ್ ಅನ್ನು ವಿಮಾನ ನಿಲ್ದಾಣ ಕಟ್ಟಡದ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನ ಯಾನ ಪ್ರದೇಶಗಳ ವಿವಿಧ ಮಟ್ಟದಲ್ಲಿ 26 ಶೌಚಾಲಯದ ಹೊರಗಡೆ ಅಳವಡಿಸಲಾಗಿದೆ. ಇದು ಕಾಯಿನ್‌ನಿಂದ ನಿರ್ವಹಣೆಯಾಗುವ ಮೆಷಿನ್ ಆಗಿದ್ದು, ಪ್ರತಿ ನ್ಯಾಪ್ಕಿನ್ ಗೆ 5 ರೂ. ಹಾಕಬೇಕು. ಬಳಸಿದ ನ್ಯಾಪ್ಕಿನ್ ಗಳನ್ನು ವಿಲೇವಾರಿ ಮಾಡಲು ನ್ಯಾಪ್ಕಿನ್ ಗಳನ್ನು ದಹನ ಮೆಷಿನ್‌ಗಳನ್ನು ಕೂಡ ಅಳವಡಿಸಲಾಗುವುದು ಎಂದು ಹೈದರಾಬಾದ್ ವಿಮಾನ ನಿಲ್ದಾಣದ ಪತ್ರಿಕಾ ಹೇಳಿಕೆ ತಿಳಿಸಿದೆ.
Next Story





