ಬ್ಯಾಂಕ್ ಖಾತೆಯಿಂದ ಹಣ ವಂಚನೆ: ದೂರು
ಉಡುಪಿ, ಮಾ.10: ಅಪರಿಚಿತ ವ್ಯಕ್ತಿಗಳು ಮೋಸದಿಂದ ಮಹಿಳೆಯೊಬ್ಬರ ಬ್ಯಾಂಕ್ ಖಾತೆಯ ಹಣವನ್ನು ಎಟಿಎಂ ಮೂಲಕ ಡ್ರಾ ಮಾಡಿ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲ ಬಡಗಬೆಟ್ಟುವಿನ ಪರಿಮಳ ಎಸ್.ಹೆಗ್ಡೆ(49) ಎಂಬವರು ಸಿಂಡಿ ಕೇಟ್ ಬ್ಯಾಂಕಿನ ಟ್ಯಾಪ್ಮಿ ಬ್ರಾಂಚ್‌ನಲ್ಲಿ ಖಾತೆ ಹೊಂದಿದ್ದು, ಫೆ.25ರ ರಾತ್ರಿ ಯಿಂದ ಫೆ.26ರ ಬೆಳಗಿನ ಮಧ್ಯಾವದಿಯಲ್ಲಿ ಅಪರಿಚಿತ ವ್ಯಕ್ತಿ ಮೋಸದಿಂದ ಇವರ ಬ್ಯಾಂಕ್ ಖಾತೆಯಿಂದ 4 ಬಾರಿ ಒಟ್ಟು 29,600ರೂ. ಹಣವನ್ನು ಬೆಂಗಳೂರಿನ ದೊಡ್ಡಬಾನಸವಾಡಿ ಎಂಬಲ್ಲಿನ ಎಟಿಎಂ ಮೂಲಕ ಡ್ರಾ ಮಾಡಿ ನಷ್ಟ ಉಂಟು ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
Next Story





