ಎಂಯುಪಿಯ ‘ಧ್ವನಿ ಎಂಡ್ ಎಪಿಫನಿ’ ಕೃತಿ ಬಿಡುಗಡೆ

ಉಡುಪಿ, ಮಾ.10: ಮಾಹೆ ವಿವಿಯ ಮಣಿಪಾಲ್ ಯುನಿವರ್ಸಲ್ ಪ್ರೆಸ್(ಎಂಯುಪಿ) ವತಿಯಿಂದ ಪ್ರಕಾಶನಗೊಂಡ 123ನೇ ಕೃತಿ ಲೇಖಕ ಪ್ರೊ.ಪ್ರಭಾಕರ ಆಚಾರ್ಯರ ‘ಧ್ವನಿ ಮತ್ತು ಎಪಿನಿ’ ಪುಸ್ತಕದ ಬಿಡುಗಡೆ ಶನಿವಾರ ಎಂಜಿಎಂ ಕಾಲೇಜಿನ ಧ್ವನ್ಯಾಲೋಕ ಸಭಾಂಗಣದಲ್ಲಿ ನಡೆಯಿತು.
ಕಂಪ್ಯೂಟರ್‌ನ ಕೀಲಿ ಮಣೆ ತಜ್ಞ ಹಾಗೂ ಎಂಐಟಿಯ ನಿವೃತ್ತ ಪ್ರೊ.ಕೆ.ಪಿ. ರಾವ್ ಅವರು ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿ, ವೇದ ಕಾಲದಲ್ಲಿ, ಇಂದು ಹಾಗೂ ಭವಿಷ್ಯದಲ್ಲಿ ಕೇಳುವ ಪ್ರಶ್ನೆಗಳು ಜಾಗತಿಕವಾಗಿ ಒಂದೇ ಆಗಿದ್ದರೂ ದೊರೆಯುವ ಉತ್ತರಗಳು ಬೇರೆ ಬೇರೆಯಾಗಿರುತ್ತವೆ ಎಂದರು.
ಮುಂಬೈಯಲ್ಲಿ ಆಂಗ್ಲ ಭಾಷಾ ಪ್ರಾದ್ಯಾಪಕರಾಗಿ ಹಲವು ಕೃತಿಗಳನ್ನು ರಚಿಸಿರುವ ಪ್ರೊ.ಆಚಾರ್ಯರ ವಿಮರ್ಶಾ ಕೃತಿಯ ಕುರಿತು ಸವಿಸ್ತಾರವಾಗಿ ಮಾತನಾಡಿದ ನಾಡೋಜ ಕೆ.ಪಿ.ರಾವ್, ಇಂಗ್ಲೀಷ್ ಶಬ್ದೋಚ್ಛಾರವನ್ನು ಪ್ರಭಾಕರ ಆಚಾರ್ಯರು ಎಂಜಿಎಂನಲ್ಲಿ ವಿದ್ಯಾರ್ಥಿಯಾಗಿದ್ದ ದಿನದಿಂದ, ಕಾಲೇಜಿನಲ್ಲಿ ಪಾಠಮಾಡುವುದರಿಂದ ಮೈಗೂಡಿಸಿಕೊಂಡಿದ್ದಾರೆ ಎಂದರು.
ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಡಾ. ಸಂಧ್ಯಾ ನಂಬಿಯಾರ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಸೃಜನಾ ಕಾಯ್ಕಿಣಿ ಕೃತಿಯ ಕುರಿತು ಮಾತನಾಡಿ, ಕೆಲವು ಭಾಗಗಳನ್ನು ಓದಿ, ವಿಶ್ಲೇಷಿಸಿದರು.
ಸೋಹಿನಿ ರಜ್ಯುಂಗ್ ಕಾರ್ಯಕ್ರಮ ನಿರೂಪಿಸಿ, ಗ್ರೀಸಿ ಸಂಜೆತ್ ಸಬಂ ಸ್ವಾಗತಿಸಿದರು.







