ಮಂಗಳೂರು: ಮಾ.13 ರಂದು ಎಸ್ ವೈ ಎಸ್ ಅಸೆಂಬ್ಲೇಜ್ ಕಾರ್ಯಕ್ರಮ
ಮಂಗಳೂರು,ಮಾ.10: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (SYS) ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಕಳೆದ ಜನವರಿ ತಿಂಗಳಿಂದ ಎಲ್ಲಾ ಬ್ರಾಂಚ್, ಸೆಂಟರ್, ಝೋನ್ ಗಳಲ್ಲಿ ಅಸೆಂಬ್ಲೇಜ್ ಎಂಬ ಕಾರ್ಯಕ್ರಮದಿಂದ ಸಂಘಟನ ನಾಯಕರಿಗೆ ತರಬೇತಿ ನೀಡುತ್ತಿದೆ. ಇದರ ಜಿಲ್ಲಾ ಸಮಿತಿಯ ಅಸೆಂಬ್ಲೇಜ್ ಕಾರ್ಯಕ್ರಮ ಮಾರ್ಚ್ 13 ಮಂಗಳವಾರ ಬೆಳಗ್ಗೆ 10.00 ಘಂಟೆ ಗೆ ನಗರದ ಪುರಭವನ ಮಿನಿ ಹಾಲ್ ನಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಸುಮಾರು 280 ಬ್ರಾಂಚ್ ಗಳ ತಲಾ 3 ಮಂದಿ 31 ಸೆಂಟರ್ ಗಳ ಪದಾಧಿಕಾರಿಗಳು 4 ಝೋನ್ ಗಳ ಕಾರ್ಯಕಾರಿಣಿ ಸದಸ್ಯರು, ಜಿಲ್ಲಾ ಕೌನ್ಸಿಲರಗಳು ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದ ಅದ್ಯಕ್ಷತೆಯನ್ನು ಜಿಲ್ಲಾದ್ಯಕ್ಷ ಪಿ.ಎಂ ಉಸ್ಮಾನ್ ಸಅದಿ ಪಟ್ಟೋರಿ ವಹಿಸಲಿದ್ದು, ರಾಜ್ಯದ್ಯಕ್ಷ ಜಿಎಂ ಕಾಮಿಲ್ ಸಖಾಫಿ ಉದ್ಘಾಟನಾ ಮಾಡಲಿದ್ದಾರೆ. ಕೇರಳ ರಾಜ್ಯ SYS ನೇತಾರರಾದ ಕೂಟಂಬಾರ ಅಬ್ದುರ್ರಹ್ಮಾನ್ ದಾರಿಮಿ ಮುಖ್ಯ ಬಾಷಣ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿ MSM ಝೈನಿ ಕಾಮಿಲ್, ರಾಜ್ಯ ನಾಯಕರಾದ ಎಸ್.ಪಿ ಹಂಝ ಸಖಾಫಿ, ಡಿ.ಕೆ ಉಮರ್ ಸಖಾಫಿ, ತೋಕೆ ಕಾಮಿಲ್ ಸಖಾಫಿ, ಜಿಲ್ಲಾ ನಾಯಕರಾದ ಎಸ್.ಎಂ ತಂಙಲ್, ಸಿದ್ದೀಖ್ ಸಖಾಫಿ, ಅಶ್ಹರಿಯ್ಯಾ ಸಖಾಫಿ, ಹಂಝ ಮದನಿಲ ಮಜೂರು ಸಅದಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಪ್ ಕಿನಾರ, ಕೋಶಾಧಿಕಾರಿ ಹನೀಪ್ ಹಾಜಿ ಮುಂತಾದವರು ಭಾಗವಹಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.







