Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ನಟನಾನುಭವದ ಬಗ್ಗೆ ಭಾವನಾ ಮಾತುಕತೆ

ನಟನಾನುಭವದ ಬಗ್ಗೆ ಭಾವನಾ ಮಾತುಕತೆ

‘ಟಗರು’ ಸಿನೆಮಾದ ಸಕ್ಸಸ್ ಮೀಟ್‌ನಲ್ಲಿ ಪಾಲ್ಗೊಂಡಿದ್ದ ನಟಿ ಭಾವನಾ ಜೊತೆಗೆ ನಡೆಸಿದ ಮಾತುಕತೆ.

-ಶಶಿ-ಶಶಿ11 March 2018 12:00 AM IST
share
ನಟನಾನುಭವದ ಬಗ್ಗೆ ಭಾವನಾ ಮಾತುಕತೆ

► ಟಗರು ಚಿತ್ರವನ್ನು ಒಪ್ಪಿಕೊಂಡ ಬಗ್ಗೆ?

ಉ: ಟಗರುಗೂ ಮೊದಲೇ ಶಿವಣ್ಣನ ಚಿತ್ರಕ್ಕೆ ನನ್ನನ್ನು ಆಹ್ವಾನಿಸಿದ್ದರು. ಆದರೆ ಕಾಲ್‌ಶೀಟ್ ಸಮಸ್ಯೆಯಿಂದ ಆಗ ನನಗೆ ನಟಿಸಲು ಸಾಧ್ಯವಾಗಿರಲಿಲ್ಲ. ಆದರೆ ಟಗರುನಲ್ಲಿ ವಿಶೇಷ ಪಾತ್ರವಿದೆ ಎಂದು ಹೇಳಿದಾಗ ಒಪ್ಪಿದೆ.

► ನಿರ್ದೇಶಕರ ಬಗ್ಗೆ?
ಉ: ನಿಜ ಹೇಳಬೇಕೆಂದರೆ ನಾನು ಸೂರಿ ಅವರನ್ನು ತುಂಬ ಗೌರವಿಸುತ್ತೇನೆ! ಯಾಕೆಂದರೆ ಅವರೇ ನನಗೆ ಕನ್ನಡದಲ್ಲಿ ಮೊದಲ ಅವಕಾಶ ಕೊಟ್ಟವರು. ಇಲ್ಲಿಯೂ 9 ದಿನಗಳ ಚಿತ್ರೀಕರಣ ಎಂದರು. ಈಗ ಪಾತ್ರ ಸಣ್ಣದಾದರೂ ಪ್ರಶಂಸೆ ಪಡೆಯುವಂತಿದೆ. ಅದು ಅವರ ಶಕ್ತಿ.

► ಪುನೀತ್ ಮತ್ತು ಶಿವರಾಜ್ ಕುಮಾರ್ ಜೊತೆಗಿನ ನಟನೆ ಹೇಗೆ ವಿಭಿನ್ನವೆನಿಸುತ್ತದೆ?

ಉ: ಇಬ್ಬರೂ ಕೂಡ ಬಹಳ ಫ್ರೆಂಡ್ಲಿ, ಡೌನ್ ಟು ಅರ್ಥ್. ಸ್ಟಾರ್ ನಟರೆಂಬ ಭಾವವನ್ನೇ ತೋರಿಸದ ವ್ಯಕ್ತಿತ್ವ ಇವರದು. ರಾಜಕುಮಾರ್ ಸರ್‌ರಂಥ ದೊಡ್ಡ ಫ್ಯಾಮಿಲಿಯಿಂದ ಬಂದಿದ್ದರೂ, ಇವರಲ್ಲಿ ಯಾವುದೇ ಅಹಂಭಾವಗಳನ್ನು ಕಂಡಿಲ್ಲ. ವೃತ್ತಿಯೆಡೆಗಿನ ಅವರ ಅರ್ಪಣಾಭಾವ ಕಂಡು ಅಚ್ಚರಿ, ಖುಷಿ ನೀಡಿದೆ.

► ಸುದೀಪ್‌ರೊಂದಿಗೆ ಎರಡು ಚಿತ್ರಗಳಲ್ಲಿ ನಟಿಸಿದ ಅನುಭವ ಹೇಗಿತ್ತು?
ಉ: ಹೌದು. ಸುದೀಪ್ ಜೊತೆಗೆ ಎರಡು ಸಿನೆಮಾಗಳಲ್ಲಿ ನಟಿಸಿದ್ದೇನೆ. ಒಂದರಲ್ಲಿ ನಾಯಕಿಯಾಗಿ ಮತ್ತು ಇನ್ನೊಂದು ಚಿತ್ರದಲ್ಲಿ ಹಾಡಲ್ಲಿ ಕಾಣಿಸಿಕೊಂಡಿದ್ದೇನೆ. ಸುದೀಪ್ ಕೂಡ ನಾನು ಮೆಚ್ಚುವ ನಟರಲ್ಲಿ ಒಬ್ಬರು.

► ನಿರ್ಮಾಪಕ ನವೀನ್‌ರೊಂದಿಗೆ ನಡೆದ ನಿಮ್ಮ ವಿವಾಹದ ಬಗ್ಗೆ?
ಉ: ನವೀನ್‌ಗೆ ಕನ್ನಡ ಗೊತ್ತು. ನವೀನ್ ನಿರ್ಮಿಸಿರುವುದು ಕನ್ನಡ ಚಿತ್ರಗಳನ್ನು. ಆದರೆ ಅವರು ತೆಲುಗಿನವರು. ರೋಮಿಯೋ ಎಂಬ ಗಣೇಶ್ ಚಿತ್ರದ ಸೆಟ್‌ನಲ್ಲಿಯೇ ನಿರ್ಮಾಪಕರಾದ ನವೀನ್ ಪರಿಚಯವಾಗಿದ್ದರು. ಆ ಪರಿಚಯ ನಮ್ಮನ್ನು ಮದುವೆಯ ತನಕ ತಂದಿತು.

► ಪ್ರಸ್ತುತ ನೀವು ತೊಡಗಿಸಿಕೊಂಡಿರುವ ಚಿತ್ರಗಳು ಯಾವುವು?
ಉ: ಕೊನೆಯದಾಗಿ ಮಲಯಾಳಂನಲ್ಲಿ ಪೃಥ್ವಿರಾಜ್‌ಗೆ ಜೋಡಿಯಾಗಿರುವ ಆ್ಯಡಂ ಜ್ಯೂವ ಎಂಬ ಸಿನೆಮಾ ಬಿಡುಗಡೆ ಯಾಯಿತು. ಅದರ ಬಳಿಕ ಥಿಯೇಟರ್‌ನಲ್ಲಿರುವ ಚಿತ್ರ ಇದೇ. ಕನ್ನಡದಲ್ಲಿ ಪ್ರಜ್ವಲ್ ದೇವರಾಜ್ ನಾಯಕರಾಗಿರುವ ‘ಇನ್‌ಸ್ಪೆಕ್ಟರ್ ವಿಕ್ರಮ್’ ಚಿತ್ರವನ್ನು ಒಪ್ಪಿಕೊಂಡಿದ್ದೇನೆ.

► ಮದುವೆಯ ಬಳಿಕ ಅವಕಾಶಗಳು ಕಡಿಮೆ ಎನಿಸಿದೆಯೇ?
ಉ: ಖಂಡಿತವಾಗಿ ಇಲ್ಲ. ಆದರೆ ನಾನು ಆರಂಭದಿಂದಲೂ ಆಯ್ದ ಚಿತ್ರಗಳಲ್ಲಿ ಮಾತ್ರ ನಟಿಸುತ್ತೇನೆ. ಹಾಗಾಗಿ ನಿಧಾನಕ್ಕೆ ಒಪ್ಪಿಕೊಳ್ಳುತ್ತಿದ್ದೇನೆ.

► ಇನ್ನು ಗ್ಲಾಮರಸ್ ಪಾತ್ರಗಳಲ್ಲಿ ನಿಮ್ಮನ್ನು ನಿರೀಕ್ಷಿಸುವಂತಿಲ್ಲ, ಎನ್ನಬಹುದೇ?
ಉ: ಹಾಗೇನಿಲ್ಲ. ನೀವು ಸೂಕ್ಷ್ಮವಾಗಿ ಗಮನಿಸಿದರೆ ನಾನು ಇದುವರೆಗೆ ನಟಿಸಿದ ಯಾವ ಚಿತ್ರಗಳಲ್ಲಿಯೂ ಹೆಚ್ಚು ಗ್ಲಾಮರಸ್ಸಾಗಿ ಕಾಣಿಸಿಲ್ಲ. ಮಾತ್ರವಲ್ಲ, ಮದುವೆಯ ಬಳಿಕ ಇಂಥದೇ ಪಾತ್ರಗಳನ್ನಷ್ಟೇ ಮಾಡುತ್ತೇನೆ ಎಂಬ ನಿರ್ಧಾರ ತೆಗೆದುಕೊಂಡಿಲ್ಲ. ಉದಾಹರಣೆಗೆ ‘ಇನ್‌ಸ್ಪೆಕ್ಟರ್ ವಿಕ್ರಮ್’ ಚಿತ್ರದಲ್ಲಿ ಡ್ರಗ್ಸ್ ಡೀಲರ್ ಪಾತ್ರ ನಿರ್ವಹಿಸುತ್ತಿದ್ದೇನೆ!

► ನಿಮಗೆ ವಿಶ್ವ ಪರ್ಯಟನೆಯ ಕನಸಿರುವುದು ಗೊತ್ತು. ನಿಮಗೆ ಇಷ್ಟವಾಗುವ ವಿದೇಶ ಯಾವುದು?

ಉ: ಸಾಮಾನ್ಯವಾಗಿ ನಾನು ಎಲ್ಲೇ ಹೋದರೂ ಅಲ್ಲಿ ಕೇರಳದವರು ಸಿಗುತ್ತಾರೆ. ಹಾಗಾಗಿ ನನಗೆ ಎಲ್ಲ ದೇಶಗಳೂ ಒಂದೇ ಅನಿಸುತ್ತವೆ. ಉಳಿದಂತೆ ದುಬೈ ಒಂದಷ್ಟು ಆಪ್ತವಾಗುತ್ತದೆ. ನಮ್ಮ ದೇಶದಿಂದ ಮೂರುವರೆ ಗಂಟೆಗಳ ಪ್ರಯಾಣ ಮಾತ್ರ ಇದೆ. ಶಾಪಿಂಗ್‌ಗೂ ಇಷ್ಟ. ಯುಎಸ್ ಕೂಡ ಇಷ್ಟ.

► ಬೇರೆ ಭಾಷೆಗಳಿಗಿಂತ ಕನ್ನಡದಲ್ಲಿನ ನಟನೆ ಹೇಗೆ ಭಿನ್ನವೆನಿಸುತ್ತದೆ?
ಉ: ನನ್ನ ನಟನೆಯ ವಿಚಾರಕ್ಕೆ ಬಂದರೆ ನನಗೆ ಭಾರೀ ಬದಲಾವಣೆ ಮಾಡಬೇಕಾಗಿ ಬಂದಿಲ್ಲ. ತಮಿಳು, ತೆಲುಗು ಮತ್ತು ಈಗ ಕನ್ನಡ ಹೀಗೆ ಭಾಷೆಗಳು ಕೂಡ ನನಗೆ ದೊಡ್ಡ ಮಟ್ಟದ ತೊಂದರೆಯೆನಿಸಿಲ್ಲ. ಸಾಮಾನ್ಯವಾಗಿ ನನಗೆ ಇಂಗ್ಲಿಷ್ ಲೆಟರ್ಸ್‌ನಲ್ಲಿ ಡೈಲಾಗ್ಸ್ ಬರೆದು ಕೊಡುತ್ತಾರೆ. ಅದರ ಅರ್ಥ ಕೇಳಿಕೊಂಡು ಕಂಠಪಾಠ ಮಾಡಿ ಹೇಳುತ್ತೇನೆ.

share
-ಶಶಿ
-ಶಶಿ
Next Story
X