Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ವಿಶ್ವದ...

ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ವಿಶ್ವದ ಅತ್ಯಂತ ಕಿರಿಯ ಆಟಗಾರ ಈಗೇನು ಮಾಡುತ್ತಿದ್ದಾರೆ ಗೊತ್ತೇ?

ವಾರ್ತಾಭಾರತಿವಾರ್ತಾಭಾರತಿ11 March 2018 5:33 PM IST
share
ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ವಿಶ್ವದ ಅತ್ಯಂತ ಕಿರಿಯ ಆಟಗಾರ ಈಗೇನು ಮಾಡುತ್ತಿದ್ದಾರೆ ಗೊತ್ತೇ?

ಕರಾಚಿ, ಮಾ.11: ಪಾಕಿಸ್ತಾನದ ಕ್ರಿಕೆಟಿಗ ಹಸನ್ ರಝಾ ರವಿವಾರ 36ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. 1996 ಅಕ್ಟೋಬರ್‌ನಲ್ಲಿ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ವಿಶ್ವದ ಅತ್ಯಂತ ಕಿರಿಯ ಆಟಗಾರನೆಂಬ ದಾಖಲೆ ಬರೆದಿದ್ದ ಹಸನ್ ರಝಾ ಆಡಿದ್ದು ಕಡಿಮೆ. ಆದರೆ ಹದಿ ಹರೆಯದಲ್ಲಿ ಟೆಸ್ಟ್ ಆಡಿ ಸಚಿನ್ ದಾಖಲೆ ಮುರಿದಿದ್ದರು.

ಸಚಿನ್ ತೆಂಡುಲ್ಕರ್ 16ರ ಹರೆಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿ ಈ ಸಾಧನೆ ಮಾಡಿದ ಭಾರತದ ಕಿರಿಯ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದರು. ಹಸನ್ 14ರ ಹರೆಯದಲ್ಲಿ ಕ್ರಿಕೆಟ್ ಪ್ರವೇಶಿಸಿ ದಾಖಲೆ ನಿರ್ಮಿಸಿದ್ದರು.

   ಹಸನ್ ರಝಾ 1996ರಿಂದ 2005ರ ಅವಧಿಯಲ್ಲಿ 7 ಟೆಸ್ಟ್ ಹಾಗೂ 16 ಏಕದಿನ ಪಂದ್ಯಗಳನ್ನು ಆಡಿದ್ದರು. ಮಾರ್ಚ್ 11, 1982ರಲ್ಲಿ ಕರಾಚಿಯಲ್ಲಿ ಜನಿಸಿದ ರಝಾ ಅವರು 1996-97ರಲ್ಲಿ ಪ್ರಥಮ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದರು. ಮೂರು ಪಂದ್ಯಗಳಲ್ಲಿ 43.40ಸರಾಸರಿಯಂತೆ 217 ರನ್ ಗಳಿಸಿದ್ದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ನೀಡಿದ ಪ್ರದರ್ಶನ ಟೆಸ್ಟ್‌ನಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ನೆರವಾಗಿತ್ತು. ಹಸನ್ ಫೈಸಲಾಬಾದ್‌ನಲ್ಲಿ 1996,ಅ.16ರಿಂದ ಅ.26ರ ತನಕ ಝಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದ್ದರು.ಆಗ ಅವರ ವಯಸ್ಸು 14 ವರ್ಷ ಮತ್ತು 227 ದಿನಗಳು. ಟೆಸ್ಟ್ ಆಡಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದ ರಝಾ ಅವರು ಮುಸ್ತಾಕ್ ಮುಹಮ್ಮದ್ ದಾಖಲೆ ಮುರಿದಿದ್ದರು.

 ಮುಸ್ತಾಕ್ ಮುಹಮ್ಮದ್ ಟೆಸ್ಟ್ ಪ್ರವೇಶಿಸುವಾಗ ವಯಸ್ಸು 15 ವರ್ಷ ಮತ್ತು 124 ದಿನಗಳು. ಹಸನ್ ರಝಾ ಮೊದಲ ಪಂದ್ಯದಲ್ಲಿ 64 ನಿಮಿಷಗಳಲ್ಲಿ 48 ಎಸೆತಗಳನ್ನು ಎದುರಿಸಿ 5 ಬೌಂಡರಿಗಳ ನೆರವಿನಲ್ಲಿ 27 ರನ್ ಗಳಿಸಿದ್ದರು. ಮೊದಲ ಟೆಸ್ಟ್ ಮುಗಿದ ಬಳಿಕ ಪಾಕಿಸ್ತಾನ ಅವರಿಗೆ ಪ್ರೋತ್ಸಾಹ ನೀಡಲಿಲ್ಲ. ಅವರನ್ನು ಟೆಸ್ಟ್ ತಂಡದಿಂದ ಕೈಬಿಟ್ಟಿತು. ಟೆಸ್ಟ್‌ನಲ್ಲಿ ಅವಕಾಶ ಸಿಗದಿದ್ದರೂ, ಏಕದಿನ ಕ್ರಿಕೆಟ್‌ನಲ್ಲಿ ಆಡುವುದನ್ನು ಮುಂದುವರಿಸಿದರು.

 1997ರಲ್ಲಿ ಭಾರತ ವಿರುದ್ಧ ಸಹರಾ ಕಪ್‌ನಲ್ಲಿ ಹಸನ್ ರಝಾ ಮೂರು ಪಂದ್ಯಗಳಲ್ಲಿ ಅವಕಾಶ ಪಡೆದಿದ್ದರು. ಎರಡನೇ ಪಂದ್ಯದಲ್ಲಿ 41 ರನ್ ಗಳಿಸಿ ಗಮನ ಸೆಳೆದರು. ಟಾಸ್ ಜಯಿಸಿದ ಪಾಕಿಸ್ತಾನ ಭಾರತವನ್ನು ಬ್ಯಾಟಿಂಗ್‌ಗೆ ಇಳಿಸಿತ್ತು. ಭಾರತ ಗೆಲುವಿಗೆ ಪಾಕ್‌ಗೆ 251 ರನ್‌ಗಳ ಸವಾಲು ವಿಧಿಸಿತ್ತು. ಇಝಾಝ್ ಅಹ್ಮದ್ (60) ಮತ್ತು ಇಂಝಮಮ್ (71) ಅರ್ಧಶತಕಗಳನ್ನು ದಾಖಲಿಸಿದರು. ರಝಾ ಅವರು ಅರ್ಧಶತಕ ದಾಖಲಿಸುವ ಕಡೆಗೆ ಹೆಜ್ಜೆ ಇರಿಸಿದ್ದಾಗ ಅವರ ಬ್ಯಾಟಿಂಗ್‌ನ್ನು ದೇಬಾಸಿಸ್ ಮೊಹಾಂತಿ ಕೊನೆಗೊಳಿಸಿದ್ದರು. ಟೊರಾಂಟೊದಲ್ಲಿ 1997,ಸೆ 21ರಂದು ನಡೆದ ಈ ಪಂದ್ಯದಲ್ಲಿ ಪಾಕಿಸ್ತಾನ ಜಯ ಗಳಿಸಿತ್ತು. ಭಾರತ ವಿರುದ್ಧದ ಇನ್ನೊಂದು ಪಂದ್ಯದಲ್ಲಿ ಆಡಿದ್ದರೂ,  ಅವರಿಗೆ ಬ್ಯಾಟಿಂಗ್ ಅವಕಾಶ ಸಿಗಲಿಲ್ಲ. ಇನ್ನೊಂದು ಅವಕಾಶಕ್ಕಾಗಿ ರಝಾ 1 ವರ್ಷ ಕಾಯಬೇಕಾಯಿತು. ಅ.19, 1999ರಲ್ಲಿ ಶಾರ್ಜಾದಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಜೀವನಶ್ರೇಷ್ಠ 77 ರನ್ ಗಳಿಸಿದರು. ಅ.22, 1999ರಲ್ಲಿ ಶ್ರೀಲಂಕಾ ವಿರುದ್ಧ 18 ರನ್ ಗಳಿಸಿದರು. ಇದು ಅವರ ವೃತ್ತಿ ಜೀವನದ ಕೊನೆಯ ಏಕದಿನ ಪಂದ್ಯ ಆಗಿತ್ತು.

ರಝಾ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆಡುವುದನ್ನು ಮುಂದುವರಿಸಿದರು. 2001ರಲ್ಲಿ ರಝಾ ಪಾಕಿಸ್ತಾನ ’ಎ’ ತಂಡದ ನಾಯಕತ್ವ ವಹಿಸಿಕೊಂಡು ಶ್ರೀಲಂಕಾ‘ಎ’ ವಿರುದ್ಧ 2 ಶತಕಗಳನ್ನು ದಾಖಲಿಸಿದರು.

   ಅಕ್ಟೋಬರ್ 2002ರಲ್ಲಿ ಟೆಸ್ಟ್ ಕ್ರಿಕೆಟ್ ತಂಡಕ್ಕೆ ರಝಾಗೆ ಮತ್ತೆ ಅವಕಾಶ ಸಿಕ್ಕಿತು. ್ಲ ಆಸ್ಟ್ರೇಲಿಯ ವಿರುದ್ಧ ಶಾರ್ಜಾದಲ್ಲಿ ನಡೆದ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಅರ್ಧಶತಕಗಳನ್ನು ದಾಖಲಿಸಿದರು. ಔಟಾಗದೆ 54 ಮತ್ತು 68 ರನ್ ಗಳಿಸಿದರು. 2002 ನವೆಂಬರ್‌ನಲ್ಲಿ ಝಿಂಬಾಬ್ವೆ ವಿರುದ್ಧದ ಟೆಸ್ಟ್‌ನಲ್ಲಿ 46 ರನ್ ಗಳಿಸಿದರು. ಝಿಂಬಾಬ್ವೆ ವಿರುದ್ಧ ಇನ್ನೊಂದು ಪಂದ್ಯದಲ್ಲಿ ಆಡಿದ್ದರೂ ಬ್ಯಾಟಿಂಗ್‌ನಲ್ಲಿ ಮಿಂಚಲಿಲ್ಲ. ಮೂರು ವರ್ಷಗಳ ಬಳಿಕ ಇಂಗ್ಲೆಂಡ್ ವಿರುದ್ಧ ಎರಡು ಟೆಸ್ಟ್‌ಗಳಲ್ಲಿ ಆಡುವ ಅವಕಾಶ ಪಡೆದಿದ್ದರೂ, ಒಟ್ಟು 21 ರನ್ ಗಳಿಸಿದರು. ಇದರೊಂದಿಗೆ ಅವರ ಟೆಸ್ಟ್ ಬದುಕು ಕೊನೆಗೊಂಡಿತು.

        ಟೆಸ್ಟ್ ಬದುಕು ಕೊನೆಗೊಂಡಿದ್ದರೂ ಹಸನ್ ರಝಾ ಪ್ರಥಮ ದರ್ಜೆ ಕ್ರಿಕೆಟ್ ಆಡುವುದನ್ನು ನಿಲ್ಲಿಸಲಿಲ್ಲ. 2005ರಲ್ಲಿ ಅವರು ಉತ್ತಮ ಸಾಧನೆ ಮಾಡಿದ್ದರು. ಎರಡು ಪ್ರಥಮ ದರ್ಜೆ ಪಂದ್ಯಗಳಲ್ಲಿ 284 ರನ್ ಗಳಿಸಿದ್ದರು. ಅದೇ ವರ್ಷ ಪಾಕಿಸ್ತಾನಕ್ಕೆ ಆಸ್ಟ್ರೇಲಿಯ ‘ಎ’ ತಂಡ ಪ್ರವಾಸ ಕೈಗೊಂಡಿತ್ತು. ಪಾಕಿಸ್ತಾನ ‘ಎ’ ವಿರುದ್ಧದ ಪ್ರಥಮ ದರ್ಜೆ ಪಂದ್ಯದಲ್ಲಿ ಟಾಸ್ ಜಯಿಸಿದ ಆಸ್ಟ್ರೇಲಿಯ ಬ್ಯಾಟಿಂಗ್ ಆಯ್ದುಕೊಂಡಿತ್ತು. ಜೇಮ್ಸ್ ಹೋಪ್ಸ್, ಬ್ರಾಡ್ ಹಾಡ್ಜ್, ಶೇನ್ ವ್ಯಾಟ್ಸನ್ ಮತ್ತು ಕ್ಯಾಮರೊನ್ ವೈಟ್ ನೆರವಿನಲ್ಲಿ ಆಸ್ಟ್ರೇಲಿಯ 407 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟ್ ಮಾಡಿದ ಪಾಕಿಸ್ತಾನ ‘ಎ’ 6 ವಿಕೆಟ್ ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿತ್ತು. ಈ ಹಂತದಲ್ಲಿ ಕ್ರೀಸ್‌ಗಿಳಿದ ಹಸನ್ 116 ರನ್ ಗಳಿಸಿದರು. ಅವರ ಬ್ಯಾಟಿಂಗ್ ನೆರವಿನಲ್ಲಿ ಪಾಕಿಸ್ತಾನ ಸೋಲಿನ ದವಡೆಯಿಂದ ಪಾರಾಗಿತ್ತು. ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. 2005-06ರಲ್ಲಿ ಯುರೇಷಿಯಾ ಕಪ್‌ನಲ್ಲಿ ರಝಾ ಅವರು ಶ್ರೇಷ್ಠ ಸಾಧನೆ ಮಾಡಿದ್ದರು. ಅವರ ನೇತೃತ್ವದ ತಂಡ ಪ್ರಶಸ್ತಿ ಬಾಚಿಕೊಂಡಿತ್ತು. ಫೈನಲ್‌ನಲ್ಲಿ ಅವರು ಅಜೇಯ 106 ರನ್ ಗಳಿಸಿದ್ದರು. ಟೂರ್ನಿಯಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದರು.5 ಪಂದ್ಯಗಳಲ್ಲಿ 122 ಸರಾಸರಿಯಂತೆ 244 ರನ್ ಸಂಪಾದಿಸಿದರು. ಫೈನಲ್ ಪಂದ್ಯ ಮುಗಿದ ಬಳಿಕ ತಂಡದ ಮ್ಯಾನೇಜರ್ ಅನುಮತಿ ಪಡೆಯದೆ ಅಬುಧಾಬಿಯಿಂದ ದುಬೈಗೆ ಪ್ರಯಾಣಿಸಿದ್ದರು. ಇತರ ನಾಲ್ವರು ಆಟಗಾರರೊಂದಿಗೆ ಪ್ರಯಾಣದ ನಿಯಮವನ್ನು ಉಲ್ಲಂಘಿಸಿದ ಕಾರಣಕ್ಕಾಗಿ ದಂಡ ಪಾವತಿಸಬೇಕಾಯಿತು. ಬಂಧನಕ್ಕೊಳಗಾಗಿ ಜೈಲು ವಾಸ ಅನುಭವಿಸಿದ್ದರು.

ಎರಡು ವರ್ಷಗಳ ಬಳಿಕ ಆಸ್ಟ್ರೇಲಿಯ ವಿರುದ್ಧದ ಪಂದ್ಯಕ್ಕೆ ಪಾಕಿಸ್ತಾನ ‘ಎ’ ತಂಡದಲ್ಲಿ ಸ್ಥಾನ ಪಡೆದರು. ಆದರೆ ಕೇವಲ 3 ರನ್ ಗಳಿಸಿದರು.ಹಸನ್ ರಝಾ ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತು ಪ್ರಥಮ ದರ್ಜೆ ಕ್ರಿಕೆಟ್‌ನಿಂದ ದೂರವಾಗಿದ್ದರೂ, ಕ್ರಿಕೆಟ್ ಆಡುವುದನ್ನು ಕೊನೆಗೊಳಿಸಲಿಲ್ಲ. ಸ್ಥಳೀಯ ಕ್ರಿಕೆಟ್‌ನಲ್ಲಿ ಆಡುತ್ತಿದ್ದಾರೆ. 

 36ರ ಹರೆಯದ ಹಸನ್ ರಝಾ 7 ಟೆಸ್ಟ್‌ಗಳಲ್ಲಿ 2 ಅರ್ಧಶತಕಗಳನ್ನು ಒಳಗೊಂಡ 235 ರನ್ ಗಳಿಸಿದ್ದಾರೆ. 68 ಗರಿಷ್ಠ ವೈಯಕ್ತಿಕ ಸ್ಕೋರ್. 16 ಏಕದಿನ ಪಂದ್ಯಗಳಲ್ಲಿ 1 ಅರ್ಧ ಇರುವ 242 ರನ್. 77 ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. 232 ಪ್ರಥಮ ದರ್ಜೆ ಪಂದ್ಯಗಳಲ್ಲಿ 13, 949 ರನ್ ದಾಖಲಿಸಿದ್ದಾರೆ. ಗರಿಷ್ಠ ವೈಯಕ್ತಿಕ ಸ್ಕೋರ್ 256. ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 36 ಶತಕ ಮತ್ತು 63 ಅರ್ಧಶತಕಗಳನ್ನು ದಾಖಲಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X