ವಿಟ್ಲ: ರೋಟರಿ-ಟೋಪ್ಕೋ ಪೊಲೀಸ್ ಚೌಕಿ ಉದ್ಘಾಟನೆ

ವಿಟ್ಲ, ಮಾ. 11: ಇಲ್ಲಿನ ನಾಲ್ಕು ರಸ್ತೆ ಕೂಡುವ ಜಂಕ್ಷನ್ ನಲ್ಲಿ ಟ್ರಾಫಿಕ್ ಪೊಲೀಸರು ತಂಗುವ ಪೊಲೀಸ್ ಚೌಕಿಯನ್ನು ವಿಟ್ಲ ರೋಟರಿ ಕ್ಲಬ್ ಹಾಗೂ ಟೋಪ್ಕೋ ಜ್ಯುವೆಲ್ಲರಿಯ ಸಹಭಾಗಿತ್ವದಲ್ಲಿ ರವಿವಾರ ಉದ್ಘಾಟಿಸಲಾಯಿತು.
ದ.ಕ.ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ವಿಟ್ಲ ಪಟ್ಟಣ ಪಂಚಾಯತ್ ಸಹಕಾರದೊಂದಿಗೆ ಸ್ಥಾಪಿಸಲಾದ ಪೊಲೀಸ್ ಚೌಕಿಯನ್ನು ರೋಟರಿ ಜಿಲ್ಲಾ ಗವರ್ನರ್ ಸುರೇಶ್ ಎಂ.ಎಂ.ಚೆಂಗಪ್ಪ, ವಿಟ್ಲ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್ ಸಿ.ಎಲ್., ಟೋಪ್ಕೋ ಜ್ಯುವೆಲ್ಲರಿ ಪಾಲುದಾರ ಟಿ.ಕೆ. ಮುಹಮ್ಮದ್, ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ರಾಮದಾಸ ಶೆಣೈ ಜೊತೆಯಾಗಿ ಉದ್ಘಾಟಿಸಿದರು.
ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷರಾದ ಸಂಜೀವ ಎಂ. ಅಧ್ಯಕ್ಷತೆ ವಹಿಸಿದ್ದರು.
ರೋಟರಿ ಜಿಲ್ಲಾ ಸದಸ್ಯ ಸಂತೋಷ್ ಶೆಟ್ಟಿ, ರೋಟರಿ ಅಸಿಸ್ಟೆಂಟ್ ಗವರ್ನರ್ ಎ.ಎಂ. ಕುಮಾರ್, ಝೋನಲ್ ಲೆಫ್ಟಿನೆಂಟ್ ಲಾರೆನ್ಸ್ ರಾಡ್ರಿಗಸ್, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಮಂಜುನಾಥ್, ರೋಟರಿ ಸ್ಥಾಪಕಾಧ್ಯಕ್ಷ ಭಾಸ್ಕರ ಶೆಟ್ಟಿ, ಪೂರ್ವಾಧ್ಯಕ್ಷರಾದ ಡಿ.ಬಿ. ಅಬೂಬಕರ್ ಹಾಗೂ ವಸಂತ ಶೆಟ್ಟಿ, ರೋಟರಿ ಕಾರ್ಯದರ್ಶಿ ಪ್ರಕಾಶ್ ನಾರಾಯಣ, ಬಾಬು ಕೆ.ವಿ., ಮಮತಾ ಸಂಜೀವ್, ಎಸ್.ಎ. ರಹ್ಮಾನ್, ಜಯರಾಮ ರೈ ನೋಟರಿ, ಅಶ್ರಫ್ ಒಕ್ಕೆತ್ತೂರು, ಹರೀಶ್ ಪೂಜಾರಿ, ಅಣ್ಣಪ್ಪ ಸಾಸ್ತಾನ್, ದಿನೇಶ್ ವಿಟ್ಲ, ಸುಚೇತನ್ ಜೈನ್, ಬಾಲಕೃಷ್ಣ ವಿ., ಪಿ.ಕೆ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ರಶೀದ್ ವಿಟ್ಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನಿಯೋಜಿತ ಅಧ್ಯಕ್ಷರಾದ ಡಾ. ಚರಣ್ ಕಜೆ ವಂದಿಸಿದರು.







