ಉಡುಪಿ ಪಲ್ಸ್ ಪೊಲೀಯೋ: ಶೇ.91.43 ಸಾಧನೆ
ಉಡುಪಿ, ಮಾ.11: ಉಡುಪಿ ಜಿಲ್ಲೆಯ 0-5ವರ್ಷದೊಳಗಿನ 82872 ಮಕ್ಕಳ ಪೈಕಿ 75771 ಮಕ್ಕಳಿಗೆ ಪೊಲೀಯೋ ಲಸಿಕೆ ಹಾಕುವ ಮೂಲಕ ಶೇ.91.43ರಷ್ಟು ಸಾಧನೆ ಮಾಡಲಾಗಿದೆ.
ಉಡುಪಿ ತಾಲೂಕಿನಲ್ಲಿ 38728 ಮಕ್ಕಳಲ್ಲಿ 35260(ಶೇ.91.05), ಕುಂದಾ ಪುರ ತಾಲೂಕಿನಲ್ಲಿ 29965 ಮಕ್ಕಳ ಪೈಕಿ 26981(ಶೇ.90.04), ಕಾರ್ಕಳ ತಾಲೂಕಿನಲ್ಲಿ 14179 ಮಕ್ಕಳ ಪೈಕಿ 13530(ಶೇ.95.42) ಮಕ್ಕಳಿಗೆ ಲಸಿಕೆ ಹಾಕಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆಯ ಪ್ರಕಟಣೆ ತಿಳಿಸಿದೆ.
Next Story





