ಮಹಿಳಾ ಗೃಹ ರಕ್ಷಕಿಯರಿಗೆ ಸನ್ಮಾನ

ಮಂಗಳೂರು, ಮಾ.11: ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಬಂಟ್ವಾಳ ಗೃಹರಕ್ಷಕದಳದ ಕಚೇರಿಯಲ್ಲಿ ಕಳೆದ 8 ವರ್ಷಗಳಿಂದ ಬಂಟ್ವಾಳ ವಿಭಾಗದ ಸಂಚಾರ ನಿಯಂತ್ರಣ ಕರ್ತವ್ಯ ನಿರ್ವಸುತ್ತಿರುವ ಹಿರಿಯ ಗೃಹರಕ್ಷಕಿಯರಾದ ಮಾಲತಿ ಮತ್ತು ಹೇಮಾವತಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಮಾದೇಷ್ಠ ಡಾ.ಮುರಲೀ ಮೋಹನ್ ಚೂಂತಾರು ಮಾತನಾಡಿ, ಮಳೆ, ಗಾಳಿ, ಬಿಸಿಲು ಎನ್ನದೇ ಕನಿಷ್ಠ ಗೌರವಧನ ದಲ್ಲಿಯೂ ಸೇವೆ ಸಲ್ಲಿಸುವ ಗೃಹರಕ್ಷಕಿಯರು ನಿಜಕ್ಕೂ ಅಭಿನಂದನಾರ್ಹರು. ಇಂತಹಾ ಮಹಿಳಾ ಗೃಹರಕ್ಷಕಿಯರು ನಿಜವಾಗಿಯೂ ದೇಶದ ದೊಡ್ಡ ಆಸ್ತಿ, ಕಳೆದ 8 ವರ್ಷಗಳಿಂದ ಸಂಚಾರ ನಿಯಂತ್ರಣ ಕರ್ತವ್ಯ ನಿರ್ವಹಿಸಿದ್ದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಬಂಟ್ವಾಳ ಘಟಕದ ಪ್ರಭಾರ ಘಟಕಾಧಿಕಾರಿ ಶ್ರೀನಿವಾಸ್, ಹಿರಿಯ ಗೃಹರಕ್ಷಕ ಅಣ್ಣು ಉಪಸ್ಥಿತರಿದ್ದರು. ಸುಮಾರು 50 ಮಂದಿ ಬಂಟ್ವಾಳ ಘಟಕದ ಗೃಹರಕ್ಷಕರು ಉಪಸ್ಥಿತರಿದ್ದರು.
Next Story





