ಮಾ. 18ರಿಂದ ಭಾರತೀಯ ವಾಯು ಪಡೆಯಿಂದ ಮೆಗಾ ಉದ್ಯೋಗ ರ್ಯಾಲಿ
ಮಂಗಳೂರು, ಮಾ.11: ಭಾರತೀಯ ವಾಯು ಪಡೆ ವತಿಯಿಂದ ಗ್ರೂಪ್ ‘ವೈ’ ಹುದ್ದೆಗೆ ಮೇಗಾ ಉದ್ಯೋಗ ರ್ಯಾಲಿಯು ಮಾ.18 ಮತ್ತು 19ರಂದು ಚಿತ್ರದುರ್ಗದ ವೀರ ವನಿತೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.
ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಅಥವಾ ಸಮಾನ ಪರೀಕ್ಷೆಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರದಲ್ಲಿ ಕನಿಷ್ಠ ಶೇ. 50 ಅಂಕವನ್ನು, ಆಂಗ್ಲ ಭಾಷೆಯಲ್ಲಿ ಶೇ. 50ಅಂಕವನ್ನು ಪಡೆದಿರಬೇಕು. ಅರ್ಹ ಅಭ್ಯರ್ಥಿಗಳು ಮಾ.18ರಂದು ಅಗತ್ಯ ದಾಖಲೆಗಳೊಂದಿಗೆ ಹಾಜರಿರಬೇಕು. ಹೆಚ್ಚಿನ ಮಾಹಿತಿಗಳಿಗೆ ಏರ್‌ಮೆನ್ ಸೆಲೆಕ್ಷನ್ ಸೆಂಟರ್, ನಂ.1, ಕ್ಯೂಬನ್ ರಸ್ತೆ, ಬೆಂಗಳೂರು-1 ದೂರವಾಣಿ ಸಂಖ್ಯೆ 080-25592199 ಅಥವಾ ww.airmenselection.cdac.in ನಲ್ಲಿ ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.
Next Story





