ರುವಾಂಡ: ಸಿಡಿಲು ಬಡಿದು ಕನಿಷ್ಠ 16 ಸಾವು
ಕಿಗಾಲಿ, ಮಾ. 11: ದಕ್ಷಿಣ ರುವಾಂಡದಲ್ಲಿ ಕಳೆದ ಎರಡು ದಿನಗಳ ಅವಧಿಯಲ್ಲಿ ಸಿಡಿಲು ಬಡಿದು ಕನಿಷ್ಠ 16 ಮಂದಿ ಮೃತಪಟ್ಟಿದ್ದಾರೆ ಹಾಗೂ ಹತ್ತಾರು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ಹೇಳಿದ್ದಾರೆ.
ಶನಿವಾರ ಪ್ರಾರ್ಥನೆ ಸಲ್ಲಿಸುತ್ತಿದ್ದ 45 ಮಂದಿಯ ಮೇಲೆ ಸಿಡಿಲು ಬಡಿಯಿತು ಹಾಗೂ 14 ಮಂದಿ ಸ್ಥಳದಲ್ಲೇ ಮೃತಪಟ್ಟರು ಎಂದು ನ್ಯರುಗುರು ಜಿಲ್ಲೆಯ ಮೇಯರ್ ಫ್ರಾಂಕೋಯಿಸ್ ಹಬಿಟೆಗೆಕೊರನ್ನು ಉಲ್ಲೇಖಿಸಿ ‘ಕ್ಸಿನುವ’ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಶುಕ್ರವಾರ ಸಂಭವಿಸಿದ ಇನ್ನೊಂದು ಸಿಡಿಲು ಬಡಿದ ಘಟನೆಯಲ್ಲಿ ಇನ್ನಿಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
Next Story





