'ಮತದಾನ ನಮ್ಮ ಹಕ್ಕು' ದ.ಕ ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆ

ಬಂಟ್ವಾಳ,ಮಾ.12: ಎಸ್ಸೆಸ್ಸೆಫ್ ದ.ಕ ಜಿಲ್ಲಾ ಸಮಿತಿ ವತಿಯಿಂದ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ನಿರ್ದೇಶನದಂತೆ ದ.ಕ ಜಿಲ್ಲಾ ವ್ಯಾಪ್ತಿಯ 10 ಡಿವಿಷನ್ ಗಳ ಮುಖ್ಯ 3 ಪಧಾದಿಕಾರಿಗಳನ್ನು ಸೇರಿಸಿ ಮೇ ತಿಂಗಳಿನಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು 'ಮತದಾನ ನಮ್ಮ ಹಕ್ಕು' ಎಂಬ ಶೀರ್ಷಿಕೆಯಲ್ಲಿ ಡಿವಿಷನ್ ನಾಯಕರ ಪೂರ್ವಭಾವಿ ಸಭೆಯು ಎಸ್ಸೆಸ್ಸೆಫ್ ದ.ಕ ಜಿಲ್ಲಾಧ್ಯಕ್ಷ ಕೆ.ಪಿ ಸಿರಾಜುದ್ದೀನ್ ಸಖಾಫಿ ಕನ್ಯಾನರವರ ಅಧ್ಯಕ್ಷತೆಯಲ್ಲಿ ಎಸ್ಸೆಸ್ಸೆಫ್ ದ.ಕ ಜಿಲ್ಲಾ ಕಛೇರಿ ಬಿ.ಸಿ.ರೋಡ್ ನಲ್ಲಿ ನಡೆಯಿತು.
ಎಸ್ಸೆಸ್ಸೆಫ್ ದ.ಕ ಜಿಲ್ಲಾಧ್ಯಕ್ಷ ಕೆ.ಪಿ ಸಿರಾಜುದ್ದೀನ್ ಸಖಾಫಿ ಕನ್ಯಾನ ವಿಷಯ ಮಂಡಿಸಿದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ದ.ಕ ಜಿಲ್ಲಾ ಉಪಾಧ್ಯಕ್ಷರುಗಳಾದ ಇಬ್ರಾಹಿಂ ಸಖಾಫಿ ಸೆರ್ಕಳ, ಕೆ.ಎಂ.ಎಚ್ ಝುಹ್ರಿ ಕೊಂಬಾಳಿ, ಕಾರ್ಯದರ್ಶಿ ಮಹಮ್ಮದಲಿ ತುರ್ಕಳಿಕೆ, ಸದಸ್ಯರುಗಳಾದ ಮುನೀರ್ ಸಖಾಫಿ ಉಳ್ಳಾಲ, ಸಯ್ಯದ್ ಖುಬೈಬ್ ತಂಙಳ್ ಉಳ್ಳಾಲ, ರಶೀದ್ ಹಾಜಿ ವಗ್ಗ, ರಫೀಕ್ ಸುರತ್ಕಲ್, ಜಬ್ಬಾರ್ ಕಣ್ಣೂರು, ಕಾಸಿಂ ಮುಸ್ಲಿಯಾರ್ ಬೆಳ್ತಂಗಡಿ ಮೊದಲಾದವರು ಉಪಸ್ಥಿತರಿದ್ದರು.
ಎಸ್ಸೆಸ್ಸೆಫ್ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಲಂದರ್ ಪದ್ಮುಂಜ ಸ್ವಾಗತಿಸಿದರು, ಕಾರ್ಯದರ್ಶಿ ಸಲೀಂ ಹಾಜಿ ಬೈರಿಕಟ್ಟೆ ವಂದಿಸಿದರು







