Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಸ್ವೀಪ್‌ನಡಿ ದ.ಕ.ದಲ್ಲಿ ‘ಜಲಥಾನ್’

ಸ್ವೀಪ್‌ನಡಿ ದ.ಕ.ದಲ್ಲಿ ‘ಜಲಥಾನ್’

‘ನಾನು ಮತ ಚಲಾಯಿಸುತ್ತೇನೆ’ ಕವನ ಗೋಷ್ಠಿ

ವಾರ್ತಾಭಾರತಿವಾರ್ತಾಭಾರತಿ12 March 2018 8:07 PM IST
share
ಸ್ವೀಪ್‌ನಡಿ ದ.ಕ.ದಲ್ಲಿ ‘ಜಲಥಾನ್’

ಮಂಗಳೂರು, ಮಾ. 12: ಮುಂಬರುವ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಹಲವಾರು ವಿನೂತನ ಕಾರ್ಯಕ್ರಮಗಳ ಮೂಲಕ ಈಗಾಗಲೇ ಗಮನ ಸೆಳೆದಿರುವ ದಕ್ಷಿಣ ಕನ್ನಡ ಜಿಲ್ಲೆ, ಸ್ವೀಪ್‌ನಡಿ ‘ಜಲಥಾನ್’ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಸಮುದ್ರ ತಡಿಯ ಜಿಲ್ಲೆಯಾದ ದ.ಕ. ಜಿಲ್ಲೆಯಲ್ಲಿ ಮೀನುಗಾರ ಮತದಾರರನ್ನು ಮತದಾನಕ್ಕೆ ಆಕರ್ಷಿಸುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ದ.ಕ. ಜಿಲ್ಲಾ ಸ್ವೀಪ್ ವತಿಯಿಂದ ದೋಣಿಗಳ ಮೂಲಕ ಸುಲ್ತಾನ್‌ಬತ್ತೇರಿಯಿಂದ ಬೆಂಗರೆಯವರೆಗೆ ಈ ವಿನೂತನ ಅಬಿಯಾನ ನಡೆಯಲಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು  ಸ್ವೀಪ್ ಮುಖ್ಯಸ್ಥ ಡಾ. ಎಂ.ಆರ್. ರವಿ ತಿಳಿಸಿದರು.

ಜಿ.ಪಂ.ನ ಮಿನಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಸಿಬ್ಬಂದಿಗಳು ದೋಣಿಗಳ ಮೂಲಕ ಜಾಗೃತಿ ಅಭಿಯಾನ ನಡೆಸಲಿದ್ದು, ಬೆಂಗರೆಯಲ್ಲಿ ನಡೆಯುವ ಸಮಾವೇಶದಲ್ಲಿ ಚುನಾವಣೆಗೆ ಸಂಬಂಧಿಸಿ ವಿವಿಧ ಪರಿಕರಗಳ ವಿತರಣೆ ಹಾಗೂ ಸ್ಥಳೀಯರಿಂದ ಮತದಾನದ ವಾಗ್ದಾನವನ್ನು ಮಾಡಿಸುವ ಕಾರ್ಯಕ್ರಮ ಇದಾಗಿದೆ ಎಂದರು.

ಇದಲ್ಲದೆ, ಇದೇ ಮೊದಲ ಬಾರಿಗೆ ‘ನಾನು ಮತ ಚಲಾಯಿಸುತ್ತೇನೆ’ ಎಂಬ ಬಹುಭಾಷಾ ಸ್ವರಚಿತ ಕವನಗಳ ಗೋಷ್ಠಿ, ನಾನೇಕ ಮತ ಚಲಾಯಿಸಬೇಕು?- ಎಂಬ 10 ಕಾರಣಗಳ ಕರಪತ್ರ ವಿತರಣೆ, ಸಮಾಜದ ಗಣ್ಯಾತಿಗಣ್ಯ ವ್ಯಕ್ತಿಗಳಿಗಾಗಿ ‘ನಾನು ಮತ ಚಲಾಯಿಸುತ್ತೇನೆ’ ಎಂಬ ಬ್ಯಾಡ್ಜ್ ವಿತರಿಸಲಾಗುತ್ತಿದೆ ಎಂದರು.

ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್ ಸಮಿತಿಯು ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ‘ಬನ್ನಿ, ಮತದಾನ ಕೇಂದ್ರಕ್ಕೆ’ ಎಂಬ ಘೋಷಣೆಯೊಂದಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಡಾ.ಎಂ.ಆರ್.ರವಿ ಹೇಳಿದರು.

ಮತದಾರರ ವ್ಯವಸ್ಥಿತ ಶಿಕ್ಷಣ ಹಾಗೂ ಮತದಾನದಲ್ಲಿ ಪಾಲ್ಗೊಳ್ಳುವಿಕೆ (ಸ್ವೀಪ್) ಮೂಲಕ ಈ ಬಾರಿಯ ಚುನಾವಣೆಯನ್ನು ಒಳಗೊಳ್ಳುವಿಕೆ, ಸುಗಮ ಮತ್ತು ನೈತಿಕ ಮತದಾನ ಎಂಬ ಧ್ಯೇಯದಡಿ ನಡೆಸಲಾಗುತ್ತಿದೆ. ಕಳೆದ ಚುನಾವಣೆಯಲ್ಲಿ ಶೇ.77ರಷ್ಟು ಮತದಾನ ನಡೆದಿದೆ. ಶೇ.23ರಷ್ಟು ಮಂದಿ ಮತದಾನ ಮಾಡದೇ ಇರುವುದನ್ನು ಗಂಭೀರವಾಗಿ ಪರಿಗಣಿಸಿ, ವಿವಿಧ ರೀತಿಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಈ ಬಾರಿ ಫೆ. 28ರ ತನಕ ನೋಂದಣಿ ಪ್ರಕಾರ 16,66,814 ಮಂದಿ ಮತದಾರರಿದ್ದಾರೆ. 22513 ಮಂದಿ ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಶೇ.65ರಷ್ಟು ಮಾತ್ರ ಮತದಾನ ನಡೆದಿದೆ. ನಗರದ ವಿದ್ಯಾವಂತ ಮತದಾರರು ಅಲ್ಲದೆ, ಇತರ ತಾಲೂಕುಗಳಲ್ಲಿ ವಿಕಲಚೇತನರು, ಲಿಂಗತ್ವ ಅಲ್ಪಸಂಖ್ಯಾತರು, ಮತದಾನದ ಮಹತ್ವ ಅರಿಯದವರು, ಯುವ ಮತದಾರರು, ಅಸಂಘಟಿತ ವಲಯದ ಕಾರ್ಮಿಕರು, ಕೈಗಾರಿಕೆ ಬಡಾವಣೆ ಮತದಾರರು, ಆದಿವಾಸಿ ಮತ್ತು ಬುಡಕಟ್ಟು ಜನಾಂಗದವರು ಮತದಾನದಿಂದ ದೂರ ಉಳಿಯುತ್ತಿದ್ದಾರೆ. ಅವರನ್ನು ಮತದಾನ ಕೇಂದ್ರಕ್ಕೆ ಕರೆ ತರುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಈಗಾಗಲೇ 1216 ಮತದಾರರ ಸಾಕ್ಷರತಾ ಸಂಘಗಳ ಸ್ಥಾಪನೆ, 118 ಸಂಸ್ಥೆಗಳಲ್ಲಿ 236 ಕ್ಯಾಂಪಸ್ ರಾಯಭಾರಿಗಳ ನೇಮಕ, 1790 ಮತಗಟ್ಟೆ ಜಾಗೃತಿ ತಂಡಗಳ ರಚನೆ, ಪ್ರಥಮ ಬಾರಿಗೆ ಚುನಾವಣಾ ಲಾಂಛನ ಬಿಡುಗಡೆ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ 1600 ಮಹಿಳಾ ಮತ್ತು ಮಕ್ಕಳ ಇಲಾಖೆ ಕಾರ್ಯಕರ್ತರಿಂದ ಮಹಿಳಾ ಓಟಥಾನ್ ಮಾಡಲಾಗಿದೆ ಎಂದು ಹೇಳಿದರು.

ಜಿಲ್ಲೆಯ ವಿಕಲಚೇತನರಿಗೆ. ಲಿಂಗತ್ವ ಅಲ್ಪಸಂಖ್ಯಾತರಿಗೆ, ಎನ್‌ಜಿಒಗಳಿಗೆ, ಅಬಕಾರಿ ಅಧಿಕಾರಿಗಳಿಗೆ ಹಾಗೂ ವಿವಿಧ ಇಲಾಖೆ ಅಕಾರಿಗಳಿಗೆ ಜಾಗೃತಿ ಕಾರ್ಯಾಗಾರ ನಡೆಸಲಾಗುತ್ತಿದೆ. ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಪಲ್ಸ್ ಪೋಲಿಯೊ ಅಭಿಯಾನದ ಜತೆಗೆ ಚುನಾವಣಾ ಜಾಗೃತಿ ಕಾರ್ಯಕ್ರಮ ಜೋಡಣೆ ಮಾಡಿದ್ದೇವೆ. ವೈದ್ಯರು ಸಲಹಾಪತ್ರ ನೀಡುವಾಗ ಮತದಾನ ಜಾಗೃತಿ ಕುರಿತು ಘೋಷವಾಕ್ಯಗಳ ಪ್ರಚಾರ ಮಾಡಲಾಗುತ್ತಿದೆ ಎಂದು ಡಾ.ರವಿ ಹೇಳಿದರು.

ಮಾಧ್ಯಮ ಪ್ರಚಾರ: ಚುನಾವಣಾ ಕರೆಯೋಲೆ, ಮಂಗಳೂರು ಆಕಾಶವಾಣಿ ಮೂಲಕ ಮತದಾರರ ಜಾಗೃತಿಗಾಗಿ ಭಾಷಣಗಳ ಸರಣಿ ಕಾರ್ಯಕ್ರಮ, ಮಾ.4ರಿಂದ ಪ್ರತಿ ಭಾನುವಾರ ಬೆಳಗ್ಗೆ 7.15ರಿಂದ 13 ಸರಣಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮತದಾರ ಪ್ರಭು- ಎಂಬ ಮತದಾರರ ಸಮಸ್ಯೆಗಳಿಗೆ, ನೇರ ೆನ್ ಇನ್ ಕಾರ್ಯಕ್ರಮವನ್ನು ಆಕಾಶವಾಣಿ ಮೂಲಕ ನಡೆಯುತ್ತಿದೆ ಎಂದರು.
 
ಖ್ಯಾತನಾಮರಿಂದ ಸಂದೇಶ
ಆಡಿಯೊ ಜಿಂಗಲ್ಸ್ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಮತದಾರರ ಸಾಕ್ಷರತಾ ಸಂಘ, ಕ್ಯಾಂಪಸ್ ರಾಯಭಾರಿ ಹಾಗೂ ಮತಗಟ್ಟೆ ಜಾಗೃತಿ ತಂಡದ ಸದಸ್ಯರಿಗಾಗಿ ಬ್ಯಾಡ್ಜ್ ವಿತರಣೆ ಹಾಗೂ ತರಬೇತಿ ಸಾಮಗ್ರಿ ವಿತರಿಸಲಾಗುತ್ತಿದೆ.

ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಡಾ.ಬಿ.ಎಂ.ಹೆಗ್ಡೆ, ಸತೀಶ್ ಶೆಟ್ಟಿ ಪಟ್ಲ, ಕುದ್ರೋಳಿ ಗಣೇಶ್, ದೇವದಾಸ್ ಕಾಪಿಕಾಡ್, ನವೀನ್ ಡಿ.ಪಡೀಲ್ ಮೊದಲಾದ ಖ್ಯಾತನಾಮರಿಂದ ಶ್ರವಣ/ ದೃಶ್ಯ ತುಣುಕುಗಳ ಮೂಲಕ ಮತದಾರರ ಜಾಗೃತಿ ಸಂದೇಶ, ಮತದಾರರ ಜಾಗೃತಿಗಾಗಿ ಪ್ರೇರಣಾದಾಯಿ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡಲಾಗುತ್ತಿದೆ ಎಂದು ಡಾ.ಎಂ.ಆರ್.ರವಿ ಹೇಳಿದರು.

ಕಿರು ಚಿತ್ರಗಳ ರಚನೆಗೆ ಸಿದ್ಧತೆ
ಚುನಾವಣೆಗೆ ಸಂಬಂಧಿಸಿ ವಿಕಲಚೇತನರು, ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಯುವ ಜನರನ್ನು ಮತದಾನಕ್ಕೆ ಪ್ರೇರೇಪಿಸಲು 30 ಸೆಕೆಂಡ್‌ಗಳ ಎರಡು ಹಾಗೂ 2 ನಿಮಿಷಗಳ ಒಂದು ಕಿರು ಚಿತ್ರ ನಿರ್ಮಿಸಲು ನಿರ್ಧರಿಸಲಾಗಿದೆ. ಇದೇ ವೇಳೆ ಯಕ್ಷಗಾನ ಹಾಡಿನ ಶೈಲಿಯಲ್ಲಿ ಮತದಾನದ ಮಹತ್ವದ ಬಗ್ಗೆ ಹಾಡು ರಚನೆಗೆ ಯಕ್ಷಗಾನ ಕ್ಷೇತ್ರದ ಖ್ಯಾತನಾಮರಾದ ಸತೀಶ್ ಪಟ್ಲ ಅವರನ್ನು ಕೋರಲಾಗಿದೆ ಎಂದು ಡಾ. ರವಿ ತಿಳಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X