ಮನಸ್ಸಿನ ರೋಗಗಳ ಶಮನ ಇಂದಿನ ಅಗತ್ಯ: ಅಕ್ಬರ್ ಅಲಿ

ಉಡುಪಿ, ಮಾ.12: ಸರ್ವ ಧರ್ಮಿಯರಿಗೂ ಮಸೀದಿ, ಮಂದಿರ, ಚರ್ಚ್ ಗಳಲ್ಲಿ ಉಚಿತ ವೈದ್ಯಕೀಯ ಶಿಬಿರಗಳನ್ನು ಆಯೋಜಿಸುವುದರ ಮೂಲಕ ಸಮಾಜದಲ್ಲಿ ಶಾಂತಿ, ಸೌಹಾರ್ಧತೆ, ಭ್ರಾತ್ವತ್ವ ನೆಲೆಸಲು ಸಾಧ್ಯವಾಗುತ್ತದೆ. ಆ ಮೂಲಕ ದೇಹದ ರೋಗಗಳೊಂದಿಗೆ ನಮ್ಮ ಮನಸ್ಸುಗಳಿಗೆ ತಗುಲಿರುವ ರೋಗವೂ ಶಮನಗೊಳ್ಳಬಹುದು ಎಂದು ಜಮಾಅತೆ ಇಸ್ಲಾಮೀ ಹಿಂದ್ ವಲಯ ಸಂಚಾಲಕ ಅಕ್ಬರ್ ಅಲಿ ಹೇಳಿದ್ದಾರೆ.
ಹ್ಯೂಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ, ಉಡುಪಿ ಜಿಲ್ಲಾ ಶಾಮಿ ಯಾನ ಸಂಯೋಜಕರ ಒಕ್ಕೂಟ ಹಾಗೂ ಮಣಿಪಾಲ ಕೆಎಂಸಿ ಆಸ್ಪತ್ರೆಯ ಸಹಯೋಗದೊಂದಿಗೆ ಉಡುಪಿಯ ಜಾಮಿಯಾ ಮಸೀದಿಯಲ್ಲಿ ಆಯೋಜಿಸಲಾದ ಉಚಿತ ವೈದ್ಯಕೀಯ ಶಿಬಿರದ ಉದ್ಘಾಟನಾ ಸಮಾರಂಭ ದಲ್ಲಿ ಅವರು ಮಾತನಾಡುತಿದ್ದರು.
ಶಾಮಿಯಾನ ಸಂಯೋಜಕ ಸಂಘದ ಅಧ್ಯಕ್ಷ ನವೀನ್ ಅಮೀನ್, ಹ್ಯೂಮ್ಯಾ ನಿಟೇರಿಯನ್ ರಿಲೀಫ್ ಸೊಸೈಟಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಮರಕಡ, ಜಾಮಿಯಾ ಮಸೀದಿಯ ಅಧ್ಯಕ್ಷ ಸಯ್ಯದ್ ಯಾಸೀನ್, ಉದ್ಯಮಿ ಮುಜೀಬ್ ಸಿಕಂದರ್ ಕೆಎಂಸಿಯ ಹಿರಿಯ ವೈದ್ಯ ಡಾ.ನೀತಾ ಮುಖ್ಯ ಅತಿಥಿಗಳಾಗಿದ್ದರು.
ಪ್ರೊ.ಅಬ್ದುಲ್ ಅಝೀಝ್, ಹಸನ್ ಕೋಡಿಬೆಂಗ್ರೆ, ಎಂ.ಶಬ್ಬೀರ್ ಮಲ್ಪೆ, ಅನ್ವರ್ ಅಲಿ ಕಾಪು, ಅಬ್ದುಲ್ ಅಝೀಜ್ ಉದ್ಯಾವರ ಮೊದಲಾ ದವರು ಉಪಸ್ಥಿತರಿದ್ದರು. ನಂತರ ಹೃದ್ರೋಗ ವಿಭಾಗ, ಕಣ್ಣಿನ ವಿಭಾಗ, ಮಧುಮೇಹ ವಿಭಾಗದ ತಜ್ಞ ವೈದ್ಯರು ಶಿಬಿರಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿದರು. ನೂರಾರು ವುಂದಿ ಶಿಬಿರದ ಪ್ರಯೋಜನ ಪಡೆದರು.







