ಉಡುಪಿ: ದ್ವಿತೀಯ ಪಿಯುಸಿ ಪರೀಕ್ಷೆ- 107 ಮಂದಿ ಗೈರು
ಉಡುಪಿ, ಮಾ.12: ಸೋಮವಾರ ಜಿಲ್ಲೆಯಲ್ಲಿ ನಡೆದ ಈ ಸಾಲಿನ ದ್ವಿತೀಯ ಪಿಯುಸಿಯ ಮೂರು ವಿಷಯಗಳ ಪರೀಕ್ಷೆಗಳಿಗೆ ಒಟ್ಟು 107 ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ ಎಂದು ಜಿಲ್ಲಾ ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆಯ ಪ್ರಕಟಣೆ ತಿಳಿಸಿದೆ.
ಇಂದಿನ ಗಣಿತ ಪರೀಕ್ಷೆಗೆ 5653 ವಿದ್ಯಾರ್ಥಿಗಳು ಹೆಸರು ನೊಂದಾಯಿಸಿ ಕೊಂಡಿದ್ದು ಇವರಲ್ಲಿ 5605 ಮಂದಿ ಪರೀಕ್ಷೆ ಬರೆದು 48 ಮಂದಿ ಗೈರುಹಾಜರಾಗಿದ್ದರೆ, ಸಮಾಜಶಾಸ್ತ್ರ ಪರೀಕ್ಷೆಗೆ ಹೆಸರು ನೊಂದಾಯಿಸಿಕೊಂಡ 1477 ವಿದ್ಯಾರ್ಥಿಗಳಲ್ಲಿ 1418 ಮಂದಿ ಹಾಜರಾಗಿ 59 ಮಂದಿ ಗೈರುಹಾಜರಾ ಗಿದ್ದಾರೆ. ಆದರೆ ಬೇಸಿಕ್ ಮ್ಯಾಥ್ಸ್‌ಗೆ ಹೆಸರು ನೊಂದಾಯಿಸಿಕೊಂಡ ಎಲ್ಲಾ 101 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story





