ಜಿಎಸ್‌ಬಿ ಸಮಾಜದ ರ್ಯಾಂಕ್ ವಿಜೇತರಿಗೆ ಪುರಸ್ಕಾರ
ಉಡುಪಿ, ಮಾ.12: ಇಲ್ಲಿನ ತೆಂಕಪೇಟೆ ಶ್ರೀಲಕ್ಷ್ಮಿವೆಂಕಟೇಶ ದೇವಸ್ಥಾನದ ಶ್ರೀಕಾಶಿಮಠ ವೆಲ್‌ಫೇರ್ ಫಂಡ್ ವತಿಯಿಂದ ಮಾ.30ರ ಶುಕ್ರವಾರ ಅಪರಾಹ್ನ 3 ಗಂಟೆಗೆ ಸಾಸ್ತಾನದ ಚೇಂಪಿಯಲ್ಲಿರುವ ಶ್ರೀಲಕ್ಷ್ಮಿವೆಂಕಟೇಶ ದೇವಸ್ಥಾನದಲ್ಲಿ ಜಿಎಸ್‌ಬಿ ಸಮಾಜದ ರ್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಕಾಶೀಮಠಾಧೀಶರಾದ ಶ್ರೀ ಸಂಯ್ಯಮೀಂದ್ರತೀರ್ಥ ಶ್ರೀಪಾದರು ರ್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಿದ್ದಾರೆ. ಆಯ್ಕೆ ಸಮಿತಿ ಅರ್ಹ ವಿದ್ಯಾರ್ಥಿಗಳ ಹೆಸರುಗಳನ್ನು ಪ್ರಕಟಿಸಲಿದೆ. ಹೆಚ್ಚಿನ ಮಾಹಿತಿಗಳಿಗೆ ಕಾರ್ಯದರ್ಶಿ ಎಚ್.ದಿನೇಶ್ ಶೆಣೈ (ಮೊ:9448984789) ಅಥವಾ ರೋಹಿತಾಕ್ಷ ಪಡಿಯಾರ್ (9448501335) ಅಥವಾ ದೇವಸ್ಥಾನವನ್ನು (ದೂರವಾಣಿ:0820-2520860) ಸಂಪರ್ಕಿಸುವಂತೆ ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
Next Story





