ಉತ್ತರಪ್ರದೇಶ ಉಪ ಚುನಾವಣೆ: ಗೋರಖ್ಪುರದಲ್ಲಿ ಬಿಜೆಪಿ, ಫುಲ್ಪುರದಲ್ಲಿ ಎಸ್ಪಿಗೆ ಮುನ್ನಡೆ
ಹೊಸದಿಲ್ಲಿ, ಮಾ.14: ಉತ್ತರಪ್ರದೇಶದ ಗೋರಖ್ಪುರ ಹಾಗೂ ಫುಲ್ಪುರ ಲೋಕಸಭಾ ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಬುಧವಾರ ಬೆಳಗ್ಗೆ ಆರಂಭವಾಗಿದೆ. ಈ ಉಪ ಚುನಾವಣೆಯು ಬಿಜೆಪಿ, ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ರಿಂದ ತೆರವಾಗಿರುವ ಗೋರಖ್ಪುರ ಕ್ಷೇತ್ರದಲ್ಲಿ ಬಿಜೆಪಿಯ ಉಪೇಂದ್ರ ದತ್ತ ಶುಕ್ಲಾ ಅವರು ಎಸ್ಪಿಯ ಪ್ರವೀಣ್ ಕುಮಾರ್ ವಿರುದ್ಧ ಮುನ್ನಡೆಯಲ್ಲಿದ್ದಾರೆ.
ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರಿಂದ ತೆರವಾದ ಫುಲ್ಪುರ ಕ್ಷೇತ್ರದಲ್ಲಿ ಎಸ್ಪಿ ಅಭ್ಯರ್ಥಿ ನಾಗೇಂದ್ರ ಪ್ರತಾಪ್ ಸಿನ್ಹಾ ಮೂರನೇ ಸುತ್ತಿನ ಅಂತ್ಯಕ್ಕೆ 1,437 ಮತಗಳಿಂದ ಮುನ್ನಡೆಯಲ್ಲಿದ್ದಾರೆ. ಬಿಜೆಪಿಯ ಕುಶಲೇಂದ್ರ ಸಿಂಗ್ ಪಟೇಲ್ ಎರಡನೇ ಸ್ಥಾನದಲ್ಲಿದ್ದಾರೆ.
ಬಿಹಾರದ ಒಂದು ಲೋಕಸಭೆ, ಎರಡು ಅಸೆಂಬ್ಲಿ ಉಪ ಚುನಾವಣೆ ಮತ ಎಣಿಕೆ ಆರಂಭ
ಬಿಹಾರದಲ್ಲಿ ಅರಾರಿಯಾ ಲೋಕಸಭೆ ಹಾಗೂ ಎರಡು ಅಸೆಂಬ್ಲಿ ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಇಂದು ಆರಂಭವಾಗಿದೆ.
ಅರಾರಿಯಾ ಲೋಕಸಭಾ ಕ್ಷೇತ್ರದಲ್ಲಿ ಆರ್ಜೆಡಿ ಪಕ್ಷ ಮುನ್ನಡೆಯಲ್ಲಿದ್ದು, ಜೆಹಾನಾಬಾದ್ ಅಸೆಂಬ್ಲಿ ಕ್ಷೇತ್ರದಲ್ಲಿ ಆರ್ಜೆಡಿ ಹಾಗೂ ಬಾಬುಯಾ ಅಸೆಂಬ್ಲಿ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆಯಲ್ಲಿದೆ.
ಆರ್ಜೆಡಿ ಹಾಲಿ ಸಂಸದ ಮುಹಮ್ಮದ್ ತಸ್ಲಿಮುದ್ದೀನ್ ನಿಧನರಾದ ಹಿನ್ನೆಲೆಯಲ್ಲಿ ಅರಾರಿಯಾ ಲೋಕಸಭ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿದ್ದು, ತಸ್ಲಿಮುದ್ದೀನ್ ಪುತ್ರ ಸರ್ಫರಾಝ್ ಆಲಂ ಆರ್ಜೆಡಿ ಅಭ್ಯರ್ಥಿಯಾಗಿದ್ದಾರೆ. ಪ್ರದೀಪ್ ಸಿಂಗ್ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿದ್ದಾರೆ.