ಉತ್ತರ ಪ್ರದೇಶ ಉಪ ಚುನಾವಣೆ: ಫುಲ್ಪುರದಲ್ಲಿ ಎಸ್ಪಿ ಜಯಭೇರಿ
ಬಿಜೆಪಿಗೆ ತೀವ್ರ ಮುಖಭಂಗ, ಗೋರಖ್ ಪುರದಲ್ಲೂ ಸೋಲಿನ ಭೀತಿ
ಲಕ್ನೋ, ಮಾ,14: ಉತ್ತರ ಪ್ರದೇಶದ ಎರಡು ಲೋಕಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಬಿರುಸಿನಿಂದ ಸಾಗುತ್ತಿದ್ದು, ಫುಲ್ಪುರದಲ್ಲಿ ಸಮಾಜವಾದಿ ಪಕ್ಷ ಜಯಭೇರಿ ಬಾರಿಸಿದೆ.
ಸಮಾಜವಾದಿ ಪಕ್ಷದ ನಾಗೇಂದ್ರ ಪಟೇಲ್ ಬಿಜೆಪಿ ಅಭ್ಯರ್ಥಿಯನ್ನು 59,613 ಮತಗಳ ಅಂತರದಲ್ಲಿ ಮಣಿಸಿದ್ದಾರೆ. ಫುಲ್ಪುರದಲ್ಲಿ ಆರಂಭದಿಂದಲೂ ಸಮಾಜವಾದಿ ಪಕ್ಷವು ಮುನ್ನಡೆ ಕಾಯ್ದುಕೊಂಡಿತ್ತು.
ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ರ ಸ್ವಕ್ಷೇತ್ರವಾದ ಗೋರಖ್ ಪುರದಲ್ಲೂ ಬಿಜೆಪಿ ಸೋಲು ಬಹುತೇಕ ಖಚಿತವಾಗಿದೆ. ಈವರೆಗಿನ ಮತ ಎಣಿಕೆಯಲ್ಲಿ ಎಸ್ ಪಿ ಅಭ್ಯರ್ಥಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಬಿಹಾರದ ಅರಾರಿಯಾ ಲೋಕಸಭಾ ಕ್ಷೇತ್ರದಲ್ಲಿ ಆರ್ ಜೆಡಿ ಮತ್ತು ಬಿಜೆಪಿ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಬಿಹಾರದ ಜೆಹನಾಬಾದ್ ಹಾಗು ಭಾಬುವಾ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಹಾಗು ಆರ್ ಜೆಡಿ ತಲಾ ಒಂದು ಕ್ಷೇತ್ರಗಳನ್ನು ಗೆದ್ದುಕೊಂಡಿದೆ.
Next Story