ಉಡುಪಿ : ನಾಳೆ ವಸತಿ ನಿವೇಶನ ಮಂಜೂರಾತಿ
ಉಡುಪಿ, ಮಾ.16: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಅರ್ಹ ನಿವೇಶನ ರಹಿತರಿಗೆ ನಿವೇಶನ ಹಂಚುವ ಬಗ್ಗೆ ಹೆರ್ಗಾ ಗ್ರಾಮದ ಸ.ನಂಬ್ರ 305-2ಎ1, 319-1ಬಿ ಮತ್ತು 191-1ಎಪಿರಲ್ಲಿ ಒಟ್ಟು 9.34 ಎಕ್ರೆ ವಿಸ್ತೀರ್ಣದ ಭೂ ಮಂಜೂರಾತಿ ಪಡೆದು ನಿವೇಶನಗಳ್ನು ಗುರುತು ಮಾಡಲಾಗಿದೆ.
ಮಾ.17ರಂದು ಅಪರಾಹ್ನ 2:00 ಗಂಟೆಗೆ ಉಡುಪಿಯ ಅಜ್ಜರಕಾಡು ಪುರಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ಅಧ್ಯಕ್ಷತೆಯಲ್ಲಿ ಅರ್ಹ ಫಲಾನುಭವಿಗಳಿಗೆ ವಸತಿ ನಿವೇಶನ ಮಂಜುರಾತಿ ಪ್ರಕ್ರಿಯೆ ಮತ್ತು ವಾಜಪೇಯ ಅಂಬೇಡ್ಕರ್ ವಸತಿ ಯೋಜನೆಯಡಿ ಮನೆ ರಚನೆ ಬಗ್ಗೆ ಪಾರದರ್ಶಕವಾಗಿ ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು. ಕಚೇರಿಯಿಂದ ಈಗಾಗಲೇ ಮಾಹಿತಿ ಪಡೆದವರು ಈ ವೇಳೆ ಕಡ್ಡಾಯವಾಗಿ ಹಾಜರಿರುವಂತೆ ಉಡುಪಿ ನಗರಸಭೆ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.
Next Story





