19ಕ್ಕೆ ಹಿರಿಯಡ್ಕದಲ್ಲಿ ಭಕ್ತರಿಂದ ಬೆಳ್ಳಿ ಸಮರ್ಪಣೆ
ಉಡುಪಿ, ಮಾ.16: ಹಿರಿಯಡ್ಕದ ಶ್ರೀವೀರಭದ್ರಸ್ವಾಮಿಯ ಪೀಠ ಮತ್ತು ಪ್ರಭಾವಳಿಯನ್ನು ರಜತದಿಂದ (ಸುಮಾರು 25 ಕೆ.ಜಿ.ಬೆಳ್ಳಿ) ಹಾಗೂ ಗರ್ಭಗೃಹದ ದೀಪಗಳಿಗೆ ರಜತ ಕವಚವನ್ನು(ಸುಮಾರು 450ಕೆ.ಜಿ.ಬೆಳ್ಳಿ) ಹೊದಿಸಿ ಸಮರ್ಪಿಸುವ ಉದ್ದೇಶದೊಂದಿಗೆ ಇದೇ ಮಾ.19ರ ಸೋಮವಾರ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಭಕ್ತರಿಂದ ‘ಬೆಳ್ಳಿ ಸಮರ್ಪಣಾ ದಿನ’ವಾಗಿ ಆಚರಿಸಲಾಗುವುದು.
ಬೆಳ್ಳಿಯ ನಾಣ್ಯವನ್ನು ಸಮರ್ಪಿಸಲು ಸಮಿತಿಯ ವತಿಯಿಂದ ಒದಗಿಸುವ ವ್ಯವಸ್ಥೆಯನ್ನು ಮಾಡಲಾಗಿದ್ದು, ಹಳೆಯ ಬೆಳ್ಳಿಯ ಸಾಮಾಗ್ರಿಗಳನ್ನು ಅರ್ಪಿಸುವ ಅವಕಾಶವನ್ನು ನೀಡಲಾಗಿದೆ. ಭಕ್ತರು ಅಧಿಕ ಸಂಖ್ಯೆಯಲ್ಲಿ ಇದರಲ್ಲಿ ಭಾಗವಹಿಸುವಂತೆ ಸಮಿತಿ ವಿನಂತಿಸಿದೆ.
Next Story





