ಕೇಂದ್ರದ ಆರೋಗ್ಯ ಯೋಜನೆಗಳನ್ನು ಉಪಯೋಗಿಸುವಲ್ಲಿ ರಾಜ್ಯ ಸರಕಾರ ವಿಫಲ : ಆರೋಪ
ಮಂಗಳೂರು,ಮಾ,16:ಕೇಂದ್ರ ಸರಕಾರದ ಆರೋಗ್ಯ ಯೋಜನೆಗಳನ್ನು ರಾಜ್ಯ ಸರಕಾರ ಉಪಯೋಗಿಸಿಕೊಳ್ಳುವಲ್ಲಿ ವಿಫಲಗೊಂಡಿದೆ. 206 ಸಮುದಾಯ ಆರೋಗ್ಯ ಕೇಂದ್ರಗಳ ಪೈಕಿ 40ರಲ್ಲಿ ಎಕ್ಸರೆ ಯಂತ್ರಗಳೆ ಇಲ್ಲ. ಸುಮಾರು 2ಸಾವಿರ ಪ್ರಾಥಮಿಕ ಕೇಂದ್ರಗಳ ಪೈಕಿ ಹೆಚ್ಚಿನ ಕೇಂದ್ರಗಳಲ್ಲಿ ವೈದ್ಯರ ಕೊರತೆ. ಇವುಗಳ ನಡುವೆ ಉಪ ಕೇಂದ್ರಗಳ ಹೊಣೆಗಾರಿಕೆಯನ್ನು ಅವರಿಗೆ ನೀಡಲಾಗಿದೆ ಎಂದು ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಸಂಚಾಲಕರಾದ ಡಾ.ರಾಘವೇಂದ್ರ ಭಟ್ ಮತ್ತು ಡಾ.ಅಣ್ಣಯ್ಯ ಕುಲಾಲ್ ಸುದ್ದಿ ಗೋಷ್ಠಿಯಲ್ಲಿಂದು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಡಾ.ಸುಕೇಶ್,ಡಾ.ರಾಜೇಶ್,ಬಿಜೆಪಿ ಮುಖಂಡರಾದ ವೇದವ್ಯಾಸ ಕಾಮತ್,ಸಂಜಯಪ್ರಭು ಮೊದಲಾದವರು ಉಪಸ್ಥಿತರಿದ್ದರು.
Next Story





