ಹೊಳೆಯಲ್ಲಿ ಮುಳುಗಿ ವ್ಯಕ್ತಿ ಮೃತ್ಯು
ಬ್ರಹ್ಮಾವರ, ಮಾ.16: ಪಡು ಬೈಕಾಡಿ ಸಮೀಪದ ಸೀತಾನದಿಯಲ್ಲಿ ಈಜುತ್ತಿದ್ದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಕೊಳಲಗಿರಿಯ ನರ್ನಾಡು ಲಕ್ಷ್ಮೀನಗರ ನಿವಾಸಿ ಸುರೇಂದ್ರ ಪೂಜಾರಿ(48) ಎಂದು ಗುರುತಿಸಲಾಗಿದೆ. ಇವರು ವಿಶ್ವನಾಥ ಪೂಜಾರಿ, ರಾಮ ಪೂಜಾರಿ ಹಾಗೂ ಇನ್ನೋರ್ವ ವ್ಯಕ್ತಿ ಜೊತೆಗೆ ಮಾ.15ರಂದು ಮಧ್ಯಾಹ್ನ ವೇಳೆ ಈಜಡಾಲು ನದಿಗೆ ಇಳಿದಿದ್ದು, ನದಿಯಲ್ಲಿ ಈಜುತ್ತಿದ್ದ ಸುರೇಂದ್ರ ಪೂಜಾರಿ ನದಿಯ ಮಧ್ಯ ಭಾಗ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು.
ಮಾ.16ರಂದು ಬೆಳಗ್ಗೆ 10:30ಕ್ಕೆ ಪಡುಬೈಕಾಡಿಯ ಕಳುವಿನ ಬಾಗಿಲಿನ ಸೀತಾನದಿಯ ನೀರಿನಲ್ಲಿ ಸುರೇಂದ್ರ ಪೂಜಾರಿಯ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





