ಟ್ರಂಪ್ ಪುತ್ರನ ಪತ್ನಿಯಿಂದ ವಿವಾಹ ವಿಚ್ಛೇದನಕ್ಕೆ ಅರ್ಜಿ

ನ್ಯೂಯಾರ್ಕ್, ಮಾ. 16: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಹಿರಿಯ ಮಗ ಡೊನಾಲ್ಡ್ ಟ್ರಂಪ್ ಜೂನಿಯರ್‌ರ ಪತ್ನಿ ನ್ಯೂಯಾರ್ಕ್‌ನಲ್ಲಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
‘‘12 ವರ್ಷಗಳ ದಾಂಪತ್ಯದ ಬಳಿಕ, ನಾವು ನಮ್ಮದೇ ಆದ ಪ್ರತ್ಯೇಕ ದಾರಿಗಳಲ್ಲಿ ಹೋಗಲು ನಿರ್ಧರಿಸಿದ್ದೇವೆ’’ ಎಂದು ಮಾಜಿ ರೂಪದರ್ಶಿ ಹಾಗೂ ನಟಿ ವ್ಯಾನಿಸಾ ಟ್ರಂಪ್ ಮತ್ತು ಟ್ರಂಪ್ ಜೂನಿಯರ್ ಗುರುವಾರ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ವ್ಯಾನಿಸಾ ಟ್ರಂಪ್ ನ್ಯೂಯಾರ್ಕ್ ರಾಜ್ಯದ ನ್ಯಾಯಾಲಯವೊಂದರಲ್ಲಿ ವಿವಾಹ ವಿಚ್ಛೇದನ ಅರ್ಜಿ ಸಲ್ಲಿಸಿದ್ದಾರೆ. ವ್ಯಾನಿಸಾ ಮತ್ತು ಟ್ರಂಪ್ ಜೂನಿಯರ್ ಪರಸ್ಪರರ ಬಗ್ಗೆ ‘ಅಗಾಧ ಗೌರವ’ ಹೊಂದಿದ್ದಾರೆ ಎಂದು ಜಂಟಿ ಹೇಳಿಕೆ ತಿಳಿಸಿದೆ.
2005ರಲ್ಲಿ ಮದುವೆಯಾಗಿರುವ ಅವರಿಗೆ ಐವರು ಮಕ್ಕಳಿದ್ದಾರೆ.
Next Story





