ಅಂಕಿತಾ ರೈನಾ ಫೈನಲ್‌ಗೆ ತೇರ್ಗಡೆ
ಗ್ವಾಲಿಯರ್ ಐಟಿಎಫ್ ಟೂರ್ನಿ

ಗ್ವಾಲಿಯರ್, ಮಾ.16: ಭಾರತದ ಅಗ್ರ ಸಿಂಗಲ್ಸ್ ಆಟಗಾರ್ತಿ ಅಂಕಿತಾ ರೈನಾ 2018ರ ಋತುವಿನಲ್ಲಿ ಮೊದಲ ಬಾರಿ ಫೈನಲ್‌ಗೆ ತೇರ್ಗಡೆಯಾದರು. 25,000 ಡಾಲರ್ ಬಹುಮಾನ ಮೊತ್ತದ ಗ್ವಾಲಿಯರ್ ಐಟಿಎಫ್ ಟೆನಿಸ್ ಟೂರ್ನಿಯಲ್ಲಿ ಎದುರಾಳಿ ಯಾನಾ ಸಿಝಿಕೊವಾ ಅನಾರೋಗ್ಯದಿಂದ ಸ್ಪರ್ಧೆಯಿಂದ ಹಿಂದೆ ಸರಿದ ಕಾರಣ ರೈನಾ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟರು. ರಶ್ಯದ ಆಟಗಾರ್ತಿ ತಲೆ ತಿರುಗುವಿಕೆಯಿಂದ ಪಂದ್ಯದಿಂದ ಹಿಂದೆ ಸರಿದಾಗ 255ನೇ ರ್ಯಾಂಕಿನ ಅಂಕಿತಾ 6-2, 4-0 ಮುನ್ನಡೆಯಲ್ಲಿದ್ದರು. 25ರ ಹರೆಯದ ರೈನಾ ಮುಂದಿನ ಸುತ್ತಿನಲ್ಲಿ ದ್ವಿತೀಯ ಶ್ರೇಯಾಂಕದ ಅಮಾಂಡೈನ್ ಹೆಸ್ಸೆ ಅವರನ್ನು ಎದುರಿಸಲಿದ್ದಾರೆ. ಹೆಸ್ಸೆ ಸ್ಲೋವಾಕಿಯದ ಟೆರೆಝಾ ಮಿಹಲಿಕೋವಾರನ್ನು 6-4, 6-2 ಸೆಟ್‌ಗಳಿಂದ ಸೋಲಿಸಿದ್ದಾರೆ. ಅಂಕಿತಾ ಕಳೆದ ವರ್ಷ ಮುಂಬೈ ಓಪನ್‌ನಲ್ಲಿ ಹೆಸ್ಸೆ ವಿರುದ್ಧ ಸೋತಿದ್ದರು.
Next Story





