Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. 'ರೇಡ್' ಚಿತ್ರ ವಿಮರ್ಶೆ : ಆದಾಯ ತೆರಿಗೆ...

'ರೇಡ್' ಚಿತ್ರ ವಿಮರ್ಶೆ : ಆದಾಯ ತೆರಿಗೆ ಅಧಿಕಾರಿಗೆ ಪ್ರಧಾನ ಮಂತ್ರಿ ಫೋನ್ ಮಾಡಿದಾಗ ...

ವಾರ್ತಾಭಾರತಿವಾರ್ತಾಭಾರತಿ17 March 2018 8:49 PM IST
share
ರೇಡ್ ಚಿತ್ರ ವಿಮರ್ಶೆ  : ಆದಾಯ ತೆರಿಗೆ ಅಧಿಕಾರಿಗೆ ಪ್ರಧಾನ ಮಂತ್ರಿ ಫೋನ್ ಮಾಡಿದಾಗ ...

ಬಾಯಿ ಬಿಟ್ಟರೆ ಭಾಷಣ ಬಿಗಿಯುವ ಅತ್ಯಂತ ಪ್ರಾಮಾಣಿಕ , ಅಷ್ಟೇ ದಕ್ಷ ಆದಾಯ ತೆರಿಗೆ ಡೆಪ್ಯುಟಿ ಕಮಿಷನರ್ ಹಾಗು ತನ್ನ ರಾಜಕೀಯ ಹಿಡಿತದ ಬಗ್ಗೆ ಅಪಾರ ಅಹಂಕಾರ ಇರುವ,  ಹಣಬಲ, ತೋಳ್ಬಲಗಳನ್ನೇ ನೆಚ್ಚಿಕೊಂಡು ಬೆಳೆದ ಉತ್ತರ ಪ್ರದೇಶದ ಗೂಂಡಾ ರಾಜಕೀಯ ಮುಖಂಡನ ನಡುವಿನ ಕದನ ಕುತೂಹಲವೇ 'ರೇಡ್' ಚಿತ್ರದ ಕತೆ. ಇಲ್ಲಿ ಅಜಯ್ ದೇವಗನ್ ಗಾಳಿಯಲ್ಲಿ ಹಾರಾಡುವ ಸಿಂಗಂ ಬ್ರಾಂಡಿನ ಸ್ಟೈಲಿಶ್ ಸೂಪರ್ ಮ್ಯಾನ್ ಅಲ್ಲ. ಆದರೆ ತಾನು ನಂಬಿದ ತತ್ವಗಳಿಗಾಗಿ ನಿಂತಲ್ಲಿಂದ ಒಂದಿಂಚು ಕದಲದ ಖಡಕ್ ಅಧಿಕಾರಿ. ಆತ ಎದುರು ಹಾಕಿಕೊಂಡಿರುವುದು ಒಂದಿಡೀ ಊರಿನ ಜನರನ್ನು ತನ್ನ ಬೆರೆಳ ತುದಿಯಲ್ಲಿ ಆಡಿಸುವ ಸಾಮರ್ಥ್ಯ ಇರುವ, ಒಂದು ರಾಜ್ಯದ ಸರಕಾರವನ್ನು ಬೀಳಿಸಬಲ್ಲೆನೆಂಬ ಸೊಕ್ಕು ತುಂಬಿಕೊಂಡಿರುವ 'ತಾವೂಜಿ' ರಾಮೇಶ್ವರ್ ಸಿಂಗ್ ( ಸೌರಭ್ ಶುಕ್ಲಾ). ಇವರಿಬ್ಬರು ಒಬ್ಬರಿಗೊಬ್ಬರು ಸ್ಪರ್ಧೆಗೆ ಬಿದ್ದಂತೆ ನೀಡಿರುವ ನಟನೆ ಇಡೀ ಚಿತ್ರದ ಜೀವಾಳ. 

1980 ರ ದಶಕದ ಕತೆಯಿದು. ತನ್ನ 49ನೇ ವರ್ಗಾವಣೆ ಬಳಿಕ ಲಕ್ನೋಗೆ ಬರುವ ಕಟ್ಟುನಿಟ್ಟಿನ ಆದಾಯ ತೆರಿಗೆ ಅಧಿಕಾರಿ ಅಮಯ್ ಪಾಟ್ನಾಯಕ್ (ಅಜಯ್) ಗೆ ದೂರವಾಣಿ ಮೂಲಕ ಒಂದು ಸುಳಿವು ಸಿಗುತ್ತದೆ. ಅದರ ಆಧಾರದಲ್ಲಿ ರಾಮೇಶ್ವರ್ ಸಿಂಗ್ ಅವರ ಕೋಟೆಯಂತ ಮನೆಗೆ ಒಂದಿನ ಬೆಳ್ಳಂಬೆಳಗ್ಗೆ ತಮ್ಮ ತಂಡದೊಂದಿಗೆ ದಾಳಿ ಮಾಡುತ್ತಾರೆ ಅಮಯ್. ಅಲ್ಲಿ ಇದೆಯೆಂದು ಹೇಳಲಾದ 420 ಕೋಟಿ ರೂಪಾಯಿಗೂ ಹೆಚ್ಚು ಅಕ್ರಮ ಸಂಪತ್ತು ಕಂಡು ಹಿಡಿಯುವುದು ಅವರ ಗುರಿ. ಹಲವು ದಿನಗಳ ಕಾಲ ಮುಂದುವರಿಯುವ ಈ ರೇಡ್ ತನ್ನ ಹಲವು ವೈಶಿಷ್ಟ್ಯಗಳಿಂದಾಗಿ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಮೊದಲು ಅಮಯ್ ನನ್ನ ಲೆಕ್ಕಕ್ಕೇ ತೆಗೆದುಕೊಳ್ಳದೆ ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ಹೊರಟು ಹೋಗು ಎನ್ನುವ ರಾಮೇಶ್ವರ್ ಕೊನೆಗೆ ತನ್ನನ್ನು ಹಾಗು ತನ್ನ ರಾಜಕೀಯವನ್ನು ಮುಗಿಸಿಯೇ ಮುಗಿಯುವ ಈ ರೇಡ್ ಅನ್ನು ನಿಲ್ಲಿಸಲು ಪಡುವ ಪಾಡು ಚಿತ್ರದ ಪ್ಲಸ್ ಪಾಯಿಂಟ್. 

ಆಗಲೇ ಹೇಳಿದಂತೆ ಚಿತ್ರ 80 ರ ದಶಕದ್ದು. ಮೊಬೈಲ್, ವಾಟ್ಸಾಪ್, ಫೇಸ್ ಬುಕ್ ಗಳು ಆಗ ಇರಲಿಲ್ಲ ಎಂಬುದನ್ನು ಬಿಟ್ಟರೆ ಚಿತ್ರ ಇವತ್ತಿನ ರಾಜಕೀಯಕ್ಕೆ ಹಾಗು ದೇಶದ ಒಟ್ಟಾರೆ ಪರಿಸ್ಥಿತಿಗೆ ಈಗಲೂ ಅನ್ವಯವಾಗುತ್ತದೆ. ರಾಜಕಾರಣಿಗಳ ಭ್ರಷ್ಟಾಚಾರ, ಅದಕ್ಕೆ ಅಧಿಕಾರಿಶಾಹಿಗಳ ಸಾಥ್ , ತಮ್ಮ ದುಡ್ಡನ್ನೇ ದೋಚುವ ರಾಜಕೀಯ ನಾಯಕರ ವಂಚನೆ ಅರ್ಥ ಮಾಡಿಕೊಳ್ಳದೆ ಅವರ ಗುಲಾಮರಾಗುವ ಜನರು, ಉನ್ನತ ಸ್ಥಾನಗಳಲ್ಲಿರುವವರು ರಾಜಕೀಯಕ್ಕಾಗಿ ಮಾಡಿಕೊಳ್ಳುವ ರಾಜಿ, ಒಟ್ಟಾರೆ ಅದು ಇಡೀ ವ್ಯವಸ್ಥೆಯನ್ನು ಹಳಿ ತಪ್ಪಿಸಿದ ರೀತಿ ಇವೆಲ್ಲವೂ ಇಂದಿಗೂ ಪ್ರಸ್ತುತ. 

ರೇಡ್ ನಿಲ್ಲಿಸಲು ಭ್ರಷ್ಟ ರಾಮೇಶ್ವರ್ ಮುಖ್ಯಮಂತ್ರಿಯಿಂದ ಪ್ರಧಾನ ಮಂತ್ರಿ ( ಇಂದಿರಾ ಗಾಂಧಿಯಂತೆ ತೋರಿಸಿದ್ದಾರೆ. ಆದರೆ ನಟಿಯ ಮುಖ ತೋರಿಸುವುದಿಲ್ಲ) ವರೆಗೂ ಹೋಗುತ್ತಾನೆ. ಸ್ವತಃ ಪ್ರಧಾನಿಯೇ ಅಧಿಕಾರಿ ಅಮಯ್ ಜೊತೆ ಮಾತಾಡುತ್ತಾರೆ. ಆದರೆ ಮಾತಾಡಿದ ಮೇಲೆ ರೇಡ್ ಏನಾಗುತ್ತದೆ ? ಪ್ರಧಾನಿ ಫೋನ್ ಗೆ ಅಮಯ್ ಹೇಗೆ ಪ್ರತಿಕ್ರಿಯಿಸುತ್ತಾರೆ ? ಆ ಪ್ರತಿಕ್ರಿಯೆ ಕೇಳಿ ಪ್ರಧಾನಿ ಏನು ಹೇಳುತ್ತಾರೆ ? ಇಂದಿನ ಪರಿಸ್ಥಿತಿಯಲ್ಲೂ ಒಬ್ಬ ಅಧಿಕಾರಿ ಹಾಗೆ ಪ್ರತಿಕ್ರಿಯಿಸಿದರೆ ಪ್ರಧಾನಿ ಅವತ್ತಿನ ಪ್ರಧಾನಿ ಹೇಳಿದಂತೆ ಹೇಳುತ್ತಿದ್ದರೇ ? ಅಧಿಕಾರಿಯ ಪರಿಸ್ಥಿತಿ ಏನಾಗುತ್ತಿತ್ತು ? ಈ ಎಲ್ಲ ಪ್ರಶ್ನೆಗಳು ಚಿತ್ರ ನೋಡುತ್ತಿದ್ದಂತೆ ನಿಮ್ಮ ಮನಸ್ಸಿನಲ್ಲಿ ಮೂಡುವ ಸಾಧ್ಯತೆ ಖಂಡಿತ ಇದೆ. 

ಅನಗತ್ಯ ಮಸಾಲೆ ತೂರಿಸುವ ಬಾಲಿವುಡ್ ನಿರ್ದೇಶಕರ ಬುದ್ಧಿಯನ್ನು ರಾಜ್ ಕುಮಾರ್ ಗುಪ್ತ ಬಿಡುವುದಾದರೂ ಹೇಗೆ ? ಹಾಗಾಗಿ ಅಲ್ಲಲ್ಲಿ ಏನೇನೂ ಅಗತ್ಯವಿಲ್ಲದ ಹಾಡುಗಳು, ಸುಮ್ಮನೆ ಒಂದು ಟ್ವಿಸ್ಟ್ ನೀಡಲು ಹೋಗಿ ಚಿತ್ರವನ್ನು ಒಂದಿಷ್ಟು ಎಳೆದಿದ್ದಾರೆ. ರೇಡ್ ಸಂದರ್ಭದಲ್ಲಿ ಮನೆಯೊಳಗೇ ಯಾರೂ ಬರುವಂತಿಲ್ಲ, ಮನೆಯಿಂದ ಯಾರೂ ಹೊರಗೆ ಹೋಗುವಂತಿಲ್ಲ ಎಂದು ಮೊದಲೇ ಘೋಷಿಸುವ ಅಮಯ್ ನಡುವೆ ರಾಮೇಶ್ವರ್ ಹಾಕುವ ಸವಾಲಿಗೆ ಮರುಳಾಗಿ ಆತನನ್ನು ಹೊರಗೆ ಹೋಗಲು ಬಿಡುವುದು ಏಕೆ  ಎಂದು ನೀವು ಕೇಳಿದರೆ ಬಾಲಿವುಡ್ ಪ್ರಕಾರ ನೀವು ದಡ್ಡರು. ರೇಡ್ ನಡುವೆ ಅಮಯ್ ಹಾಗು ಪತ್ನಿ ( ಇಲಿಯಾನ ಡಿಕ್ರುಸ್ ) ಹಾಡುವುದು ಹೇಗೆ , ಏಕೆ ಎಂದು ಕೇಳುವುದು ನಿಮ್ಮ ಅಧಿಕಪ್ರಸಂಗಿತನ. 

ಅಮಯ್ ತಂಡದ ಅಧಿಕಾರಿಗಳಾಗಿ ಅಮಿತ್ ಸಿಯಾಲ್ ಗಮನ ಸೆಳೆಯುತ್ತಾರೆ. ಇಡೀ ಚಿತ್ರದಲ್ಲಿ ನೆನಪಿನಲ್ಲಿ ಉಳಿಯುವ ಪಾತ್ರ ಅಮ್ಮಾಜಿ ( ಪುಷ್ಪಾ ಜೋಶಿ) ಯದ್ದು. ರಾಮೇಶ್ವರ್ ನ ತಾಯಿಯಾಗಿ ಸತ್ಯ ಹೇಳುವಾಗ ಮನೆಮಂದಿಯನ್ನೂ ಲೆಕ್ಕಿಸದ ಆಕೆಯ ಪಾತ್ರ ಚಿತ್ರದ ಹೈಲೈಟ್. 

ಅಮಯ್ ಗೆ ಸುಳಿವು ನೀಡುವ ರಾಮೇಶ್ವರ್ ಕುಟುಂಬದೊಳಗಿನ 'ವಿಭೀಷಣ' ಯಾರು ಎಂಬುದು ಚಿತ್ರದ ಸಸ್ಪೆನ್ಸ್. ರಿತೇಶ್ ಶಾ ಸಂಭಾಷಣೆ ಗಮನ ಸೆಳೆಯುತ್ತದೆ. ಅಜಯ್ , ಸೌರಭ್ ನಟನೆಗೆ ಹ್ಯಾಟ್ಸಾಫ್ ಹೇಳಲೇಬೇಕು. ಕೆಲವು ಎಡವಟ್ಟುಗಳನ್ನು , ಇನ್ನು ಕೆಲವು ಉದ್ದೇಶಪೂರ್ವಕ ಮಸಾಲೆಗಳನ್ನು  ಸಹಿಸಿಕೊಂಡರೆ ಒಟ್ಟಾರೆ ಒಮ್ಮೆ ನೋಡಬಹುದಾದ  ಉತ್ತಮ ಚಿತ್ರ 'ರೇಡ್ ' . 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X