ತ್ರಿಕೋನ ಟ್ವೆಂಟಿ -20 ಸರಣಿಯ ಫೈನಲ್ : ಭಾರತದ ಗೆಲುವಿಗೆ 167 ರನ್ ಸವಾಲು
ಬಾಂಗ್ಲಾದ ಶಬ್ಬೀರ್ ರಹ್ಮಾನ್ 77 ರನ್
ಕೊಲಂಬೊ, ಮಾ.18: ನಿದಾಸ್ ತ್ರಿಕೋನ ಟ್ವೆಂಟಿ-20 ಸರಣಿಯ ಫೈನಲ್ ನಲ್ಲಿ ರವಿವಾರ ಶ್ರೀಲಂಕಾ ವಿರುದ್ಧ ಭಾರತ ಗೆಲುವಿಗೆ 167 ರನ್ ಗಳ ಸವಾಲು ಪಡೆದಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಬಾಂಗ್ಲಾ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 166 ರನ್ ಗಳಿಸಿದೆ.
ಬಾಂಗ್ಲಾದ ಶಬ್ಬೀರ್ ರಹ್ಮಾನ್ 77 ರನ್ (50ಎ,7ಬೌ,4ಸಿ) ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಭಾರತದ ಯಜುವೇಂದ್ರ ಚಹಾಲ್ 18ಕ್ಕೆ 3 ವಿಕೆಟ್, ಉನಾದ್ಕಟ್ 33ಕ್ಕೆ 2 ಮತ್ತು ವಾಷಿಂಗ್ಟನ್ ಸುಂದರ್ 20ಕ್ಕೆ 1 ವಿಕೆಟ್ ಪಡೆದರು.
Next Story