ಬಂಟ್ವಾಳ : ಸ್ಥಾಯಿ ಸಮಿತಿ ಸಭೆ

ಬಂಟ್ವಾಳ,ಮಾ.19: ಯಾವುದೇ ಟೆಂಡರ್ ಪ್ರಕ್ರಿಯೆ ನಡೆಸುವುದಿದ್ದರೂ ಅದು ಸ್ಥಾಯಿ ಸಮಿತಿ ಅಧ್ಯಕ್ಷರ ಉಪಸ್ಥಿತಿಯಲ್ಲೇ ನಡೆಯಬೇಕು, ಕಾರ್ಯಕ್ರಮವೊಂದರ ಆಹ್ವಾನಪತ್ರದಲ್ಲೂ ತನ್ನ ಹೆಸರನ್ನು ಕೈ ಬಿಡಲಾಗಿದೆ ಎಂದು ಬಂಟ್ವಾಳ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ವಾಸು ಪೂಜಾರಿ ತರಾಟೆಗೆ ತೆಗೆದುಕೊಂಡ ಘಟನೆ ಬಂಟ್ವಾಳದಲ್ಲಿ ಸೋಮವಾರ ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ನಡೆಯಿತು.
ಎಲ್ಲ ನಿರ್ಧಾರಗಳನ್ನು ಅಧಿಕಾರಿಗಳೇ ಕೈಗೊಳ್ಳುವುದಾದರೆ ಸ್ಥಾಯಿ ಸಮಿತಿ ಇರುವುದಾದರೂ ಯಾತಕ್ಕೆ ಎಂದು ಬಂಟ್ವಾಳ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ವಾಸು ಪೂಜಾರಿ ತರಾಟೆಗೆ ತೆಗೆದುಕೊಂಡ ಘಟನೆ ಬಂಟ್ವಾಳದಲ್ಲಿ ಸೋಮವಾರ ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ನಡೆಯಿತು.
ಮಧ್ಯಾಹ್ನದ ಬಳಿಕ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ವಾಸು ಪೂಜಾರಿ, ತಾನು ಸ್ಥಾಯಿ ಸಮಿತಿ ಅಧ್ಯಕ್ಷನಾದ ದಿನದಿಂದ ಜನಪರ ಕಾರ್ಯಗಳನ್ನು ಅನುಷ್ಠಾನಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ ಹಲವು ಸಂದರ್ಭ ತನ್ನನ್ನು ಕಡೆಗಣಿಸಲಾಗುತ್ತಿದೆ ಎಂದು ಆಪಾದಿಸಿದರು.
ಯಾವುದೇ ಟೆಂಡರ್ ಪ್ರಕ್ರಿಯೆ ನಡೆಸುವುದಿದ್ದರೂ ಅದು ಸ್ಥಾಯಿ ಸಮಿತಿ ಅಧ್ಯಕ್ಷರ ಉಪಸ್ಥಿತಿಯಲ್ಲೇ ನಡೆಯಬೇಕು, ಕಾರ್ಯಕ್ರಮವೊಂದರ ಆಹ್ವಾನಪತ್ರದಲ್ಲೂ ತನ್ನ ಹೆಸರನ್ನು ಕೈ ಬಿಡಲಾಗಿದೆ. ಇತ್ತೀಚೆಗೆ ಸಭೆಯೊಂದಕ್ಕೂ ತನ್ನನ್ನು ಕರೆಯಲಿಲ್ಲ. ಬಂಟ್ವಾಳ ಕೊಟ್ರಮಣಗಂಡಿಯಲ್ಲಿರುವ ನೂತನ ಶೌಚಾಲಯಕ್ಕೆ ಇನ್ನು ವಿದ್ಯುತ್ ಸಂಪರ್ಕವಾಗದೆ ಇರುವಾಗ ಅಷ್ಟೊಂದು ತರಾತುರಿಯಲ್ಲಿ ಉದ್ಘಾಟಿಸುವ ಅಗತ್ಯವೆನಿತ್ತು ಎಂದು ಪ್ರಶ್ನಿಸಿದರು.
ಖರ್ಚು-ವೆಚ್ಚದಲ್ಲಿ ಕಂಡು ಬಂದಿರುವ ಲೋಪಗಳ ಬಗ್ಗೆ ಸದಸ್ಯೆ ಚಂಚಲಾಕ್ಷಿ ಅಸಮಾಧಾನಗೊಂಡರು. ಇದನ್ನು ಹಾಗೆ ಬಿಟ್ಟರೆ ಸಾಮಾನ್ಯ ಸಭೆಯಲ್ಲೂ ಚರ್ಚೆ, ಗಲಾಟೆಗೂ ಕಾರಣವಾಗುತ್ತದೆ ಎಂದು ಸಭೆಯ ಗಮನಸೆಳೆದು ಇಂಜಿನಿಯರ್ ಅವರಲ್ಲಿ ಪ್ರಶ್ನಿಸಿದರು.ಪ್ರತಿಕ್ರಿಯಿಸಿದ ಇಂಜಿನಿಯರ್ ಡಿಮೆಲ್ಲೊ ಅವರು ಖರ್ಚು- ವೆಚ್ಚವನ್ನು ನೋಡಿಕೊಳ್ಳವುದು ಕಾನೂನಾತ್ಮಕವಾಗಿಯೂ ನನ್ನ ಕೆಲಸವಲ್ಲ ಎಂದರು.
ನುರಿತ ಸಿ.ಎ.ಪದವಿ ಹೊಂದಿರುವ ಅಕೌಂಟೆಂಟನ್ನು ನಿಯಕ್ತಿಗೊಳಿಸಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಮುಖ್ಯಾಧಿಕಾರಿ ತಿಳಿಸಿದರು.
ಪುರಸಭಾ ಅವರಣದಲ್ಲಿ ಖಜಾನೆ ತೆರೆಯಲು ಅನುಮತಿ ದೊರೆತಿದೆ. ಇಲ್ಲಿರುವ ಬ್ಯಾಂಕನ್ನು ತೆರವುಗೊಳಿಸಿ ಖಜಾನೆಯನ್ನು ತೆರೆಯಲಾಗುವುದು ಬಳಿಕ ಎಲ್ಲಾ ಹಣಕಾಸು ವ್ಯವಹಾರ ಖಜಾನೆಯಲ್ಲೆ ನಡೆಯಲಿದೆ ಎಂದು ಮುಖ್ಯಾಧಿಕಾರಿ ರೇಖಾ ಶೆಟ್ಟಿ ಸಭೆಗೆ ತಿಳಿಸಿದರು. ಸದಸ್ಯರಾದ ಜಗದೀಶ್ ಕುಂದರ್, ಪ್ರಭಾ ಸಾಲಿಯಾನ್, ಚಂಚಲಾಕ್ಷಿ ಹಾಜರಿದ್ದು ಮಾತನಾಡಿದರು.







