ಗುರುಪುರ : ಸಾಮೂಹಿಕ ವಿವಾಹ ಕಾರ್ಯಕ್ರಮದ ಪ್ರಯುಕ್ತ ಮತಪ್ರಭಾಷಣ

ಗುರುಪುರ, ಮಾ.19: ಬಡವ, ದೀನ ದಲಿತರ ಕಷ್ಟಗಳಿಗೆ ಯಾವುದೇ ಪ್ರತಿಫಲಾಪಕ್ಷೆ ಇಲ್ಲದೆ ಸಹಕರಿಸುವ ಎಲ್ಲರಿಗೂ ಅಲ್ಲಾಹನ ಶ್ರೀರಕ್ಷೆ ಸದಾ ಇರುತ್ತದೆ ಎಂದು ಬೊಳ್ಳೂರು ಜುಮಾ ಮಸೀದಿಯ ಖತೀಬ್ ಅಲ್‍ಹಾಜ್ ಅಝ್‍ಹರ್ ಫೈಝಿ ಬೊಳ್ಳುರು ಉಸ್ತಾದ್ ಹೇಳಿದರು.
ಅವರು ಸಾದಾತ್ ವಲೀ ಝಿಕ್ರ್ ಮಜ್ಲಿಸ್ ಟ್ರಸ್ಟ್ (ರಿ) ಕೆರೆಕಾಡು ಮುಲ್ಕಿ ಇದರ ಆಶ್ರಯದಲ್ಲಿ 14ನೇ ವಾರ್ಷಿಕ ಸಾಮೂಹಿಕ ವಿವಾಹ ಕಾರ್ಯಕ್ರಮದ ಪ್ರಯುಕ್ತ ಗುರುಪುರ ಕೈಕಂಬದ ಬಳಿ ರವಿವಾರ ಆರಂಭಗೊಂಡ ಎರಡು ದಿನಗಳ ಧಾರ್ಮಿಕ ಮತಪ್ರಭಾಷಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ದಾನ ಧರ್ಮ ಇಸ್ಲಾಂ ಕಡ್ಡಾಯಗೊಳಿಸಿ ಕಾರ್ಯವಾಗಿದೆ. ಅದನ್ನು ನೀಡುವಾಗ ಯಾವುದೇ ಪ್ರತಿಫಲಗಳನ್ನು ಅಪೇಕ್ಷೆಸಿ ನೀಡಿದರೆ, ಅದು ಬೌಧಿಕ ಲೋಕಕ್ಕೆ ಮಾತ್ರ ಸೀಮಿತವಾಗುವುದು. ಯಾವುದೇ ಪ್ರತಿಫಲಾಪೇಕ್ಷೆಗಳಿಲ್ಲದೆ ಮಾಡುವ ದಾನ ಧರ್ಮಗಳನ್ನು ಅಲ್ಲಾಹನು ಸ್ವೀಕರಿಸುವನು ಮತ್ತು ಅದು ಸ್ವರ್ಗವನ್ನು ಪ್ರಾಪ್ತಿಗೊಳಿಸುವ ಮಾರ್ಗವೂ ಆಗಿದೆ ಎಂದು ನುಡಿದರು.
ಪ್ರಾಸ್ತಾವಿಕ ಮಾತನಾಡಿದ ಪರ್ತಕರ್ತ ಇಕ್ಬಾಲ್ ಬಾಳಿಲಾ, ಸಾದಾತ್ ವಲೀ ದಿಕ್ರ್ ಮಜ್ಲಿಸ್ ಟ್ರಸ್ಟ್ ಸಿರಿವಂತರು ಹುಟ್ಟುಹಾಕಿದ ಸಂಸ್ಥೆಯಲ್ಲ, ಅದು ಬಡಪಾಯಿ ಉಸ್ತಾದರೊಬ್ಬರು ಸ್ಥಾಪಿಸಿದ್ದು, ಈ ಮೂಲಕ ಅವರು ಯಾವುದೇ ಹೆಸರು ಪ್ರತಿಷ್ಠೆಯನ್ನು ಆಸೆ ಪಟ್ಟವರಲ್ಲ. ತನ್ನಲಿರುವುದನ್ನು ಹಂಚಿತಿನ್ನುವ ಮನೋಬಾವದವರು. ಆದ್ದರಿಂದಲೇ ಸಾದಾತ್ ದಿಕ್ರ್ ಮಜ್ಲಿಸ್ ಕಳೆದ 14 ವರ್ಷಳಲ್ಲಿ ಸಾಮೂಹಿಕ ವಿವಾಹಗಳನನು ಆಯೋಜಿಸಿ 101 ಬಡ ಹೆಣ್ಣುಮಕ್ಕಳ ವಿವಾಹ ನಡೆಸಿದೆ.
ಕಾಪು ಪರಿಸರದ ಕೋಟೆ ಮಲ್ಲಾರು ಪ್ರದೇಶದಲ್ಲಿ ಸಣ್ಣ ವೃದ್ಧಾಶ್ರಮ ಸ್ಥಾಪಿಸಿಕೊಂಡು ನಿಜವಾಗಿ ಅಶಕ್ತರಾಗಿರುವ ವೃದ್ಧರು, ಅನಾಥ ಮಕ್ಕಳನ್ನು ಪಾಲನೆ ಪೋಷಣೆ ಮಾಡುತ್ತಾ ಅವರ ಆಶಾಕೇಂದ್ರವಾಗಿ ಬೆಳೆಯುತ್ತಿದೆ ಎಂದರು.
ಅಲ್ಲದೆ, ಹಝ್ರತ್ ಸಾದಾತ್ ವಲೀ ದಿಕ್ರ್ ಮಜ್ಲಿಸ್ ಸಂಸ್ಥೆಯ ಮುಂದಿನ ಗುರಿ ಹಾಗೂ ಅದು ಕಳೆದ 14ವರ್ಷಗಳಿಂದ ನಡೆದು ಬಂದ ಕಷ್ಟದ ಹಾದಿಯನ್ನು ಜನರ ಮುಂದಿರಿಸಿದರು.
ಕಾರ್ಯಕ್ರಮವನ್ನು ಗುರುಪುರ ದಾರುಸ್ಸಲಾಮ್ ಜುಮಾ ಮಸೀದಿಯ ಖತೀಬ್ ಮಜೀದ್ ದಾರಿಮಿ ಕುಂಬ್ರ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕಾಪು ಕೋಟೆ ಮಲ್ಲಾರು ಹಝ್ರತ್ ಸಾದಾತ್ ವೃದ್ಧಾಶ್ರಮದ ಗೌರವಾಧ್ಯಕ್ಷ ಆಲಿ ಮೋನಾಕ ಅಡ್ಡೂರು ವಹಿಸಿದ್ದರು. ಸಮಾರಂಭದಲ್ಲಿ ನವಾಝ್ ಮನ್ನಾನಿ, ಪಣವೂರು ಕೇರಳ ಮುಖ್ಯ ಪ್ರಭಾಷಣಗೈದರು.
ಜೆ.ಎಂ. ಬಂಗ್ಲೆಗುಡ್ಡೆ ಮಸೀದಿಯ ಖತೀಬ್ ಹೈದರ್ ಸಖಾಫಿ, ಬೈಲು ಪೇಟೆ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಝಕರಿಯಾ, ಬಾಮಿ ಆಂಗ್ಲ ಮಾಧ್ಯಮ ಶಾಲೆ ತೆಂಕುಳಿಪಾಡಿಯ ಸಂಚಾಲಕ ರಿಯಾಝ್ ಮಿಲನ್, ಉದ್ಯಮಿಗಾಲಾದ ಹಾಜಿ ಎಂ.ಎಚ್ ಮಯ್ಯದ್ದಿ, ಎಂ.ಎಸ್. ಶೇಖ್ ಮೋನು, ಹಮೀದ್ ಹಾಜಿ ಚೇರ್ವತ್, ಮಿಸ್ರಿಯಾ ಗ್ರೂಪ್‍ನ ಹಂಝ ಗುರುಪುರ ಮೊದಲಾದವರು ಉಪಸ್ಥಿತರಿದ್ದರು.
ಪರ್ತಕರ್ತ ಇಕ್ಬಾಲ್ ಬಾಳಿಲಾ ಸ್ವಾಗತಿಸಿದರು. ಇರ್ಷಾದ್ ಕೆರಕಾಡು ಧನ್ಯವಾದ ಗೈದರು. ರೆಹ್ಮಾನ್ ಹಳೆಯಂಗಡಿ ಕಾರ್ಯಕ್ರಮ ನಿರೂಪಿಸಿದರು.







