ಮಂಡ್ಯ: ಬೈಕ್ -ಸ್ಕೂಟರ್ ಮುಖಾಮುಖಿ ಢಿಕ್ಕಿ; ಓರ್ವ ಮೃತ್ಯು
ಮಂಡ್ಯ, ಮಾ.19: ಮಳವಳ್ಳಿ ತಾಲೂಕಿನ ಬೆಳಕವಾಡಿ ಸಮೀಪ ರವಿವಾರ ತಡರಾತ್ರಿ ಬೈಕ್ ಹಾಗೂ ಸ್ಕೂಟರ್ ನಡುವೆ ಢಿಕ್ಕಿಯಾಗಿ ಓರ್ವ ಮೃತಪಟ್ಟು ಮೂವರು ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಬೈಕ್‍ನಲ್ಲಿದ್ದ ಮಳವಳ್ಳಿ ತಾಲೂಕಿನ ಹೊನಗಹಳ್ಳಿ ಗ್ರಾಮದ ನಂಜುಂಡಯ್ಯ ಎಂಬುವರ ಪುತ್ರ ಸಂಜೀವ್‍ಕುಮಾರ್(22)ಮೃತಪಟ್ಟಿದ್ದು, ಹಿಂಬದಿ ಸವಾರ ಕಗ್ಗಲೀಪುರ ಗ್ರಾಮದ ಬಸವಯ್ಯ ಎಂಬುವರ ಪುತ್ರ ಶಿವಣ್ಣ, ಸ್ಕೂಟರ್ ನಲ್ಲಿದ್ದ ವಾಸುಹಳ್ಳಿ ಗ್ರಾಮದ ರಮೇಶ್ ಹಾಗೂ ಮಹೇಶ್ ಗಾಯಗೊಂಡಿದ್ದಾರೆ.
ಮಹೇಶ್‍ನನ್ನು ಬೆಂಗಳೂರಿನ ನಿಮ್ಹಾನ್ಸ್‍ಗೆ ಹಾಗೂ ಶಿವಣ್ಣ ಮತ್ತು ರಮೇಶ್ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಬೆಳಕವಾಗಿ ಪೊಲೀಸರು ತಿಳಿಸಿದ್ದಾರೆ.
Next Story