ಎಸ್ಸೆಸ್ಸೆಫ್ ಬೆಳ್ಳಾರೆ ಸೆಕ್ಟರ್ ಕಾಂಟ್ರೀವ್ ಕ್ಯಾಂಪ್
.jpg)
ಸುಳ್ಯ, ಮಾ.19: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್(ಎಸ್ಸೆಸ್ಸೆಫ್)ಬೆಳ್ಳಾರೆ ಸೆಕ್ಟರ್ ಇದರ ವತಿಯಿಂದ ‘ಕಾಂಟ್ರೀವ್ ಕ್ಯಾಂಪ್’ ರವಿವಾರ ರಾತ್ರಿ ಎಣ್ಮೂರಿನಲ್ಲಿ ನಡೆಯಿತು.
ಬೆಳ್ಳಾರೆ ಸೆಕ್ಟರ್ ಅಧ್ಯಕ್ಷ ಟಿ.ಎಂ.ಅಬ್ದುರ್ರಹ್ಮಾನ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ನಡೆದ ಶಿಬಿರವನ್ನು ಸುಳ್ಯ ಡಿವಿಷನ್ ಅಧ್ಯಕ್ಷ ಅಬ್ದುಲ್ಲತೀಫ್ ಸಖಾಫಿ ಗೂನಡ್ಕ ಉದ್ಘಾಟಿಸಿ, ತರಗತಿ ನಡೆಸಿ ಕಾರ್ಯಕರ್ತರ ಜೀವನ ಶೈಲಿಯ ಕುರಿತು ಸಮಗ್ರವಾಗಿ ತಿಳಿಸಿದರು. ನಂತರ ನಡೆದ ಅಧ್ಯಕ್ಷೀಯ ಭಾಷಣದಲ್ಲಿ ಆಧ್ಯಾತ್ಮಿಕತೆ ಹಾಗೂ ಆತ್ಮೀಯತೆಯ ಸಂದೇಶ ಕಾರ್ಯಕ್ರಮದ ಯಶಸ್ವಿಯಲ್ಲಿ ಮಹತ್ತರ ಪಾತ್ರ ವಹಿಸಿತ್ತು
ಕಾರ್ಯಕ್ರಮದಲ್ಲಿ ಖ್ಯಾತ ಸಂಘಟನಾ ಚತುರ ಸಿದ್ದೀಕ್ ಹಾಜಿ ಕಬಕ ಶಾಖಾ ಸಬಲೀಕರಣ ಹಾಗೂ ನಡವಳಿಕೆಯ ಕುರಿತು ಸವಿಸ್ತಾರವಾಗಿ ನಡೆಸಿದ ತರಗತಿಯು ನೆರೆದ ಪ್ರತಿಯೋರ್ವ ಕಾರ್ಯಕರ್ತನ ಹೃದಯದಲ್ಲೂ ನವ ಚೈತ್ಯವನ್ನು ತುಂಬಿತು. ಎಸ್ಸೆಸ್ಸೆಫ್ ದ.ಕ. ಸಮಿತಿಗೆ ನೂತನ ಸದಸ್ಯರಾಗಿ ಆಯ್ಕೆಯಾದ ಅಬ್ದುಲ್ ಸಖಾಫಿ ಗೂನಡ್ಕರವರನ್ನು ಬೆಳ್ಳಾರೆ ಸೆಕ್ಟರ್ ವತಿಯಿಂದ ಸನ್ಮಾನಿಸಲಾಯಿತು.ಸುಳ್ಯ ಡಿವಿಶನ್ ಕಾರ್ಯದರ್ಶಿ ಜಿ.ಕೆ.ಇಬ್ರಾಹೀಂ ಅಮ್ಜದಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಬಳಿಕ ನಮ್ಮಿಂದ ಅಗಲಿದ ಸುನ್ನೀ ಕಾರ್ಯಕರ್ತರಿಗೆ ಪ್ರಾರ್ಥಿಸಲಾಯಿತು.
ಕಾರ್ಯಕ್ರಮಕ್ಕೆ ಎಣ್ಮೂರು ಶಾಖೆಯ ವತಿಯಿಂದ ಸಂಪೂರ್ಣ ಸಹಕಾರ ನಿಡಲಾಯಿತು. ಸೆಕ್ಟರ್ ವ್ಯಾಪ್ತಿಯ ಪ್ರತೀ ಶಾಖೆಯ ಹಲವು ಕಾರ್ಯಕರ್ತರು ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಸಿದೀಕ್ ಕಟ್ಟೆಕಾರ್ಸ್ ಸುಳ್ಯ, ಅಬ್ದುಲ್ ಖಾದರ್ ಕೊಳ್ತಂಗರೆ, ಖಲೀಲ್ ಝುಹ್ರಿ, ಸಿದ್ದೀಕ್ ಸಅದಿ ಎಣ್ಮೂರು ಹಾಗೂ ಎಸ್ಸೆಸ್ಸೆಫ್, ಎಸ್‌ವೈಎಸ್, ಕೆಸಿಎಫ್ ಕಾರ್ಯಕರ್ತರು ಭಾಗವಹಿಸಿದ್ದರು.
ಸೆಕ್ಟರ್ ಕಾರ್ಯದರ್ಶಿ ಕಲಾಂ ಝುಹ್ರಿ ಬೆಳ್ಳಾರೆ, ಸ್ವಾಗತಿಸಿ, ಜೊ. ಕಾರ್ಯದರ್ಶಿ ರಫೀಕ್ ಅಂಜದಿ ಇಂದ್ರಾಜೆ ವಂದಿಸಿದರು.







