ಕಿಡ್ನಿ ವೈಫಲ್ಯ : ನೆರವಿಗೆ ಮನವಿ

ಭಟ್ಕಳ,ಮಾ.19: ಕಳೆದ ಎರಡು ವರ್ಷಗಳಿಂದ ಕಿಡ್ನಿ ವೈಫಲ್ಯದಿಂದಾಗಿ ಹಲವು ತೊಂದರೆಗಳನ್ನು ಅನುಭವಿಸುತ್ತಿರುವ ಹೆಬಳೆ ಪಂಚಾಯತ್ ವ್ಯಾಪ್ತಿಯ ಹನಿಫಾಬಾದ್ ನಿವಾಸಿ ಶಾಲಾ ಟೆಂಪೋ ಚಾಲಕ ಜಾಫರ್ ಮುಲ್ಲಾ ಎಂಬವರಿಗೆ ಆರ್ಥಿಕ ನೆರವು ನೀಡುವಂತೆ ಮಂಗಳೂರು ಎ.ಜೆ. ಆಸ್ಪತ್ರೆಯ ನೆಫ್ರೊಲೊಜಿಸ್ಟ್ ರಾಘವೇಂದ್ರ ನಾಯಕ ತಿಳಿಸಿದ್ದಾರೆ.
ವಾರದಲ್ಲಿ ಮೂರು ಬಾರಿ ಡಯಾಲಿಸಿಸ್ ಮಾಡಬೇಕಾದ ಅನಿವಾರ್ಯತೆ ಉಂಟಾಗಿದ್ದು ಜೀವನಪರ್ಯಾಂತ ಡಯಾಲಿಸಿಸ್ ಮಾಡಬೇಕಾಗಿದೆ ಇದಕ್ಕಾಗಿ ಜಾಫರ್ ಮುಲ್ಲಾರಿಗೆ ಪ್ರತಿ ತಿಂಗಳು 25000 ಖರ್ಚಾಗುತ್ತಿದ್ದು ಆರ್ಥಿಕ ತೊಂದರೆಯಲ್ಲಿರುವ ಇವರಿಗೆ ಸಹಾಯಕ್ಕಾಗಿ ಮನವಿ ಮಾಡಿಕೊಂಡಿದ್ದು ಇರುತ್ತದೆ.
ದಾನಿಗಳು ಈ ವ್ಯಕ್ತಿಗೆ ಆರ್ಥಿಕ ಸಹಾಯ ನೀಡುವುದರ ಮೂಲಕ ಇವರಿಗೆ ಬದುಕನ್ನು ನೀಡಬೇಕೆಂದು ಮನವಿ ಜಾಫರ್ ಮುಲ್ಲಾ ಮನವಿ ಮಾಡಿಕೊಂಡಿದ್ದಾರೆ.
ಅಲ್ಲದೆ ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಂ.ಆರ್. ಮಾನ್ವಿ, ದಾನಿಗಳಲ್ಲಿ ಮನವಿ ಮಾಡಿಕೊಂಡಿದ್ದು, ಜಾಫರ್ ಮುಲ್ಲಾ ಕಳೆದ 5-6 ವರ್ಷಗಳಿಂದ ಶಾಲೆಯಲ್ಲಿ ಟೆಂಪೊ ಚಾಲಕನಾಗಿ ಕೆಲಸ ಮಾಡಿದ್ದಾರೆ. ಈಗ ಕೆಲಸ ಮಾಡುವ ಶಕ್ತಿಯನ್ನು ಕಳೆದುಕೊಂಡಿದ್ದು ವಾರದಲ್ಲಿ ಮೂರು ಬಾರಿ ಡಯಾಲಿಸಿಸ್ ಗೆ ಒಳಗಾಗುತ್ತಿದ್ದಾರೆ. ಮೂರು ಮಕ್ಕಳನ್ನು ಹೊಂದಿರುವ ಇವರು ಕುಟುಂಬ ನಡೆಸಲು ಕೂಡ ಸಾಧ್ಯವಾಗುತ್ತಿಲ್ಲ. ಆಡಳಿತ ಮಂಡಳಿಯವರು ಇವರಿಗೆ ಕೆಲಸ ಮಾಡಿಸದೆ ಪ್ರತಿ ತಿಂಗಳು ವೇತನವನ್ನೂ ನೀಡುತ್ತಿದ್ದು ಆದರೆ ಇದು ಇವರ ಕುಟುಂಬ ನಿರ್ವಹಣೆಗೆ ಸಾಕಾಗುತ್ತಿಲ್ಲ. ಚಿಕಿತ್ಸೆಗಾಗಿ ವೈದ್ಯರು 25000ಕ್ಕೂ ಅಧಿಕ ಹಣ ಖರ್ಚಾಗುತ್ತೆ ಎಂದು ವರದಿ ನೀಡಿದ್ದು, ಆದ್ದರಿಂದ ಸಹಾಯಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಬ್ಯಾಂಕ್ ಖಾತೆಯ ವಿವರ :
ಹೆಸರು: ಜಾಫರ್ ಮುಲ್ಲಾ
ಬ್ಯಾಂಕ್: ವಿಜಯ ಬ್ಯಾಂಕ್ ಭಟ್ಕಳ
ಖಾತೆ ಸಂಖ್ಯೆ: 107501011004300
ಐಎಫ್‍ಎಸ್_ಕೋಡ್: VIJB0001033
ಮೊಬೈಲ್: 8861588285







